`ಫ್ರೆಂಚ್ ಬಿರಿಯಾನಿ’ ಚಿತ್ರದ ʻಬೆಂಗಳೂರುʼ ಸಾಂಗ್ ರಿಲೀಸ್.
ಕನ್ನಡದ ಬಹುನಿರೀಕ್ಷಿತ ಚಿತ್ರ ʻಫ್ರೆಂಚ್ ಬಿರಿಯಾನಿʼ ಯ ʻಬೆಂಗಳೂರುʼ ಸಾಂಗ್‌ನ್ನ ಇಂದು ರಿಲೀಸ್ ಮಾಡಲಾಗಿದೆ.
ಬೆಂಗಳೂರಿನ ನೈಜ ಚಿತ್ರಣವನ್ನ ರ‍್ಯಾಪ್ ಸಾಂಗ್ ಮೂಲಕ ತೋರಿಸಲಾಗಿದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನದ ಈ ಹಾಡನ್ನ ಸ್ವತಃ ವಾಸುಕಿ ವೈಭವ್ ಮತ್ತು ಅವಿನಾಶ್ ರಚಿಸಿದ್ದು, ಅದಿತಿ ಸಾಗರ್ ಹಾಡಿದ್ದಾರೆ. ಕೋವಿಡ್ ಗೂ ಮುನ್ನ ಈ ಚಿತ್ರದ ಚಿತ್ರೀಕರಣ ಆಗಿರೋದ್ರಿಂದ ಕೋವಿಡ್ ಪೂರ್ವ ಬೆಂಗಳೂರನ್ನ ಮತ್ತೊಮ್ಮೆ ನೋಡಲು ವೀಕ್ಷಕರಿಗೆ ಅವಕಾಶ ಈ ಹಾಡಿನ ಮೂಲಕ ಸಿಗಲಿದೆ.
ಪುನೀತ್ ರಾಜ್‌ಕುಮಾರ್‌ರವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಫ್ರೆಂಚ್ ಬಿರಿಯಾನಿ ಇದೇ ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಡ್ಯಾನಿಶ್ ಸೇಠ್, ಸಾಲ್ ಯೂಸುಫ್ ಅಭಿನಯದ ಈ ಚಿತ್ರಕ್ಕೆ
ಪನ್ನಗಭರಣ ನಿರ್ದೇಶಕರು. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಫ್ರೆಂಚ್ ಬಿರಿಯಾನಿ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ಎ ತಲ್ವಾರ್ ನಿರ್ಮಾಪಕರು..
ಹಾಸ್ಯ ಕಥೆಯ ಈ ಚಿತ್ರದಲ್ಲಿ ದಾನಿಶ್ ಸೇಠ್ ಬೆಂಗಳೂರಿನ ಶಿವಾಜಿನಗರದ ಆಟೋರಿಕ್ಷಾ ಚಾಲಕ ಆಸ್ಗರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಸೈಮನ್ ಪಾತ್ರದಲ್ಲಿ ಸಾಲ್ ಯೂಸುಫ್ ಅಭಿನಯಿಸಿದ್ದಾರೆ. ಕಳೆದುಹೋದ ಸುಮಾರನ್ನ ಹುಡುಕುವಾಗ ಸೈಮನ್ ಮತ್ತು ಆಸ್ಗರ್ ಎರಡೂ ಪಾತ್ರಗಳು ಪರಿಚಯವಾಗಲಿದ್ದು, ನಂತರದ ಬೆಳವಣಿಗೆಗಳು ಕುತೂಹಲ ಮೂಡಿಸಲಿದೆ. ಫ್ರೆಂಚ್ ಬಿರಿಯಾನಿ ಚಿತ್ರ ಜುಲೈ 24 ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.
ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್
ಮುಂಬೈ: ಕನ್ನಡದ 'ಸೂರ್ಯವಂಶ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ...








