ಫ್ರೆಂಚ್ ಓಪನ್ 2021 – ಆವೆ ಮಣ್ಣಿನಲ್ಲಿ ಸ್ಪೆನ್ ಗೂಳಿ ಸ್ತಬ್ಧ.. ಫೈನಲ್ ಗೆ ಎಂಟ್ರಿಯಾದ ನೊವಾಕ್ ಜಾಕೊವಿಕ್
ಸ್ಪೇನ್ ಗೂಳಿಗೆ ಆವೆ ಮಣ್ಣಿನಲ್ಲಿ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಸೋಲಿನ ರುಚಿ ತೋರಿಸಿದ್ದಾರೆ.
ಕ್ಲೇ ಕೋರ್ಟ್ ಕಿಂಗ್ ಅಂತನೇ ಫೇಮಸ್ ಆಗಿರುವ ನಡಾಲ್ ಅವರು 2021ರ ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್ ನಲ್ಲಿ ಸೋಲು ಅನುಭವಿಸಿದ್ದಾರೆ.
ಜಿದ್ದಾಜಿದ್ದಿನ ಹಾಗೂ ರೋಚಕ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜಾಕೊವಿಕ್ ಅವರು 3-6, 6-3, 7-6, 6-2ರಿಂದ ರಫೆಲ್ ನಡಾಲ್ ಅವರನ್ನು ಪರಾಭವಗೊಳಿಸಿದ್ರು.
13 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ರಫೆಲ್ ಅವರ 21ನೇ ಗ್ರ್ಯಾಂ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಕನಸನ್ನು ನೊವಾಕ್ ಜಾಕೊವಿಕ್ ಅವರು ಭಗ್ನಗೊಳಿಸಿದ್ರು. ಹಾಗೇ ನೋವಾಕ್ ಜಾಕೊವಿಕ್ ಅವರು 19ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯತ್ತ ಚಿತ್ತವನ್ನಿಟ್ಟಿದ್ದಾರೆ. ಫೈನಲ್ ನಲ್ಲಿ ನೊವಾಕ್ ಜಾಕೊವಿಕ್ ಮತ್ತು ಗ್ರೀಸ್ ನ ಸ್ಟೆಫಾನೊಸ್ ಸಿಟ್ಸ್‍ಪಸ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕು ಮೊದಲು ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಗ್ರೀಸ್ ನ ಸ್ಟೆಫನೊಸ್ ಸಿಟ್ಸಪಸ್ ಅವರು 6-3, 6-3, 4-6, 4-6, 6-3ರಿಂದ ಯುಎಸ್ ಓಪನ್ ರನ್ನರ್ ಅಪ್ ಅಲೆಕ್ಸಾಂಡರ್ ಝಿವೆರ್ವ್ ಅವರನ್ನು ಸೋಲಿಸಿದ್ರು.
ಸದ್ಯ ವಿಶ್ವ ಟೆನಿಸ್ ನಲ್ಲಿ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವರ ಹಿಂದೆ ನೊವಾಕ್ ಜಾಕೊವಿಕ್ ಕೂಡ ಸ್ಪರ್ಧೆ ಒಡುತ್ತಿದ್ದಾರೆ.