ಫ್ರೆಂಚ್ ಓಪನ್ 2021- ಮೊದಲ ಸೆಮಿಫೈನಲ್ ನಲ್ಲಿ ಅಲೆಕ್ಸಾಂಡರ್ ಝಿವೆರೆವ್ – ಸ್ಟೆಫಾನೊಸ್ ಸಿಟ್ಸಿಪಸ್ ಫೈಟ್
ಜರ್ಮನಿಯ ಅಲೆಕ್ಸಾಂಡರ್ ಝಿವೆರೆವ್ ಅವರು ಫ್ರೆಂಚ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಸೆಮಮಿಫೈನಲ್ ಪ್ರವೇಶಿಸಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ ಮಣ್ಣಿನ ಅಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಝಿವೆರೆವ್ 6-4, 6-1, 6-1ರಿಂದ ಸ್ಪೇನ್ ನ ಅಲೆಜಾಂಡ್ರೊ ಡೆವಿಡೊವಿಚ್ ಫೋಕಿನಾ ಅವರನ್ನು ಸೋಲಿಸಿದ್ರು.
ಈ ಮೂಲಕ ಅಲೆಕ್ಸಾಂಡರ್ ಅವರು ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ಸುಮಾರು 25 ವರ್ಷಗಳ ಬಳಿಕ ಅಂದ್ರೆ 1996ರ ನಂತರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಜರ್ಮನಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಗ್ರೀಕ್ ನ ಸ್ಟೆಫಾನೊಸ್ ಸಿಟ್ಸಿಪಸ್ ಅವರು 6-3, 7-6, 7-5 ರಿಂದ ರಷ್ಯಾದ ಎರಡನೇ ಶ್ರೇಯಾಂಕಿತ ಡನಿಲ್ ಮೆಡ್ವೆಡೇವ್ ಅವರನ್ನು ಪರಾಭವಗೊಳಿಸಿದ್ರು.
ಹೀಗಾಗಿ ಸೆಮಿಫೈನಲ್ ನಲ್ಲಿ ಸ್ಟೆಪಾನೊಸ್ ಸಿಟ್ಸಿಪಸ್ ಮತ್ತು ಅಲೆಕ್ಸಾಂಡರ್ ಝಿವೆರೆವ್ ಮುಖಾಮುಖಿಯಾಗಲಿದ್ದಾರೆ.
ಹಾಗೆ ಇನ್ನುಳಿದ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳ ಪೈಕಿ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ನೊವಾಕ್ ಜಾಕೊವಿಕ್ ಮತ್ತು ಮೆಟ್ಟೊಯ್ ಬೆರೆಟಿನಿ ನಡುವೆ ನಡೆದ್ರೆ, ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಮತ್ತು ಡಿಯಾಗೊ ಸ್ಚಿವಾಟ್ಜ್ ಮನ್ ನಡುವೆ ಫೈಟ್ ನಡೆಯಲಿದೆ.