ಶಿವಮೊಗ್ಗ : ಮೀನು ಹಿಡಿಯಲು ತೆರಳಿದ್ದ ಸ್ನೇಹಿತರು ನೀರು ಪಾಲಾಗಿರುವ ಘಟನೆ ನಡೆದಿದೆ.
ಈ ಘಟನೆ ಶಿವಮೊಗ್ಗದ (Shivamogga) ಕುರುಬರಪಾಳ್ಯ ಬಳಿ ನಡೆದಿದೆ. ಈ ಘಟನೆ ತುಂಗಾನದಿಯಲ್ಲಿ ನಡೆದಿದೆ. ಮಹಮ್ಮದ್ ಫೈಸಲ್ (19) ಹಾಗೂ ಅಂಜುಂಖಾನ್ (19) ಸಾವನ್ನಪ್ಪಿದ ದುರ್ದೈವಿಗಳು. ಸವಾಯಿಪಾಳ್ಯದ ಮಹಮ್ಮದ್ ಫೈಸಲ್ ಹಾಗೂ ಇಲಿಯಾಜ್ ನಗರದ ಅಂಜುಂಖಾನ್ ಪದವಿ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ಇಬ್ಬರೂ ಸೇರಿಕೊಂಡು ಮೀನು ಹಿಡಿಯಲು ತೆರಳಿದ ವೇಳೆ ಈ ಘಟನೆ ನಡೆದಿದೆ.
ಘಟನೆಯಿಂದ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ