ADVERTISEMENT
Wednesday, February 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

From chokers to Champions: South Africa’s journey from heartbreaks to glory

Shwetha by Shwetha
June 15, 2025
in ಕ್ರಿಕೆಟ್, National, Newsbeat, Sports, ಕ್ರೀಡೆ, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆ ಇದೆ. 146 ವರ್ಷಗಳ ದಕ್ಷಿಣ ಆಫ್ರಿಕಾದ ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಮೊದಲ ಬಾರಿ ಐಸಿಸಿ ಟೆಸ್ಟ್ ಚಾಂಪಿಯನ್‍ಷಿಪ್ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿದೆ. 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಿದೆ. ಕಾಮನಬಿಲ್ಲಿನ ರಾಷ್ಟ್ರದ ಹುಡುಗರು ಕ್ರಿಕೆಟ್ ಕಾಶಿ ಲಾರ್ಡ್ಸ್‌ ಅಂಗಣದಲ್ಲಿ ನಾಟ್ಯ ಮಯೂರಿಯಂತೆ ಮನಸಾರೆ ಕುಣಿದಾಡಿ ಸಂಭ್ರಮಿಸಿದ್ದು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ.

Related posts

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

February 11, 2026
If you want lucky money to come to you, write this mantra on a white sheet of paper and keep it with you.

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

February 10, 2026

ಅದೇನು ಕಾಕತಾಳಿಯವೋ ಗೊತ್ತಿಲ್ಲ… ದಕ್ಷಿಣ ಆಫ್ರಿಕಾದ ಗಾಂಧಿ ಅಂತಲೇ ಹೆಸರಾದ ನೆಲ್ಸನ್ ಮಂಡೆಲಾ ಸಮಾನತೆಗಾಗಿ, ಪ್ರಜಾಪ್ರಭುತ್ವಕ್ಕಾಗಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ 27 ವರ್ಷಗಳ ಕಾಲ ಸೆರೆಮನೆ ವಾಸ ಮಾಡಿದ್ದರು. ಕೊನೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆ ದೇಶದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ಗಾಂಧೀಜಿಯವರ ಶಾಂತಿ ಮಂತ್ರವನ್ನು ಪಠಿಸುತ್ತಾ, ಬಿಳಿಯರ ವಿರುದ್ಧ ಹೋರಾಟ ನಡೆಸಿ ದಕ್ಷಿಣ ಆಫ್ರಿಕಾಗೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟ ಆಧುನಿಕ ಗಾಂಧಿ ನೆಲ್ಸನ್ ಮಂಡೆಲಾ..


ಇದೀಗ 27 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾದ ಮೂಲ ನಿವಾಸಿ ಬುಡಕಟ್ಟು ಸಮುದಾಯದ ತೆಂಬಾ ಬವುಮಾ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಚಾಂಪಿಯನ್‍ಷಿಪ್ ಆಗಿ ಹೊರಹೊಮ್ಮಿದೆ. ಹಾಗೆ ನೋಡಿದ್ರೆ ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ತಂಡ. ಆದ್ರೆ ಐಸಿಸಿ ಟ್ರೋಫಿಯ ಟೂರ್ನಿಗಳಲ್ಲಿ ನತದೃಷ್ಟ ಟೀಮ್. 21 ವರ್ಷಗಳ ನಿಷೇಧದ ಬಳಿಕ 1991ರಲ್ಲಿ ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್‍ಗೆ ಪ್ರವೇಶ ಪಡೆದುಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಂದಲ್ಲ ಬರೋಬ್ಬರಿ 11 ಐಸಿಸಿ ಟೂರ್ನಿಯ ಸೆಮಿಫೈನಲ್ ಪಂದ್ಯಗಳಲ್ಲಿ ಹೃದಯಘಾತವಾಗಿತ್ತು. ಒಂದು ಬಾರಿ ಫೈನಲ್‍ನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು. ಒಟ್ಟಾರೆ, 1998ರ ಐಸಿಸಿ ನಾಕೌಟ್ ಟೂರ್ನಿ ಗೆದ್ದ ಬಳಿಕ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಪ್ರಶಸ್ತಿ ಗೆದ್ದುಕೊಂಡಿದೆ.


ಅಂದ ಹಾಗೇ ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್‍ಗೆ ಅದ್ಭುತ ಕ್ರಿಕೆಟಿಗರನ್ನು ಪರಿಚಯಿಸಿದೆ. ಆಧುನಿಕ ಕ್ರಿಕೆಟ್ ಅಂದ್ರೆ 1991ರ ಬಳಿಕ ಕೆಪ್ಲರ್ ವೆಸೆಲ್ಸ್, ಹ್ಯಾನ್ಸಿ ಕ್ರೋನಿಯೆ, ಶಾನ್ ಪೊಲಾಕ್, ಗ್ರೇಮ್ ಸ್ಮಿತ್, ಎಬಿ ಡಿವಿಲಿಯರ್ಸ್‌ ರಂತಹ ಅಪ್ರತಿಮ ನಾಯಕರು ಹರಿಣಗಳ ತಂಡವನ್ನು ಮುನ್ನಡೆಸಿದ್ದರು. ಆದ್ರೆ ಅವರಿಗೆಲ್ಲಾ ಐಸಿಸಿ ಟ್ರೋಫಿ ಎನ್ನುವುದು ಮರೀಚಿಕೆಯಾಗಿತ್ತು. ಆದ್ರೆ ಈಗ ತೆಂಬಾ ಬವುಮಾ ಎಂಬ ವಾಮನಮೂರ್ತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎವರ್‌ ಗ್ರೀನ್‌ ನಾಯಕನಾಗಿದ್ದಾನೆ.

ಹೌದು, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಗೆದ್ದಿರುವುದು ವಿಶೇಷವೇ. ಯಾಕಂದ್ರೆ ಐಸಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದ್ರೆ ಟ್ರೋಫಿ ಗ್ಯಾರಂಟಿ ಎಂಬ ಮಾತು ಈ ಸಲ ಸುಳ್ಳಾಗಿದೆ. 15 ವರ್ಷಗಳ ಬಳಿಕ ಇದೇ ಮೊದಲ ಬಾರಿ ಆಸೀಸ್ ಫೈನಲ್‍ನಲ್ಲಿ ಸೋಲು ಅನುಭವಿಸಿದೆ. ಹರಿಣಗಳ ಆರಂಭಿಕ ಬ್ಯಾಟರ್ ಏಡನ್ ಮಾರ್ಕರಂ ಶತಕ ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರೂ ಹೈಲೆಟ್ ಆಗಿರೋದು ನಾಯಕ ತೆಂಬಾ ಬವುಮಾ.
ನೆನಪಿರಬಹುದು.. 1999ರ ವಿಶ್ವಕಪ್ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಕ್ಯಾಚ್ ಅನ್ನು ಹರ್ಷಲ್ ಗಿಬ್ಸ್ ಕೈಚೆಲ್ಲಿದ್ರು. ಆಗ ಸ್ಟೀವ್ ವಾ ಗಿಬ್ಸ್ ಬಳಿ ಬಂದು ನೀನು ಬರೀ ಕ್ಯಾಚ್ ಕೈಚೆಲ್ಲಿದ್ದಲ್ಲ… ವಿಶ್ವಕಪ್ ಟ್ರೋಫಿಯನ್ನು ಕೈಚೆಲ್ಲಿಕೊಂಡೆ ಎಂದು ಹೇಳಿದ್ದರು ಎಂಬ ಮಾತಿದೆ. ಆ ಪಂದ್ಯದಲ್ಲಿ ಸ್ಟೀವ್ ವಾ ಶತಕ ಸಿಡಿಸಿದ್ದರು. ಅದೇ ರೀತಿ ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಸ್ಟೀವ್ ಸ್ಮಿತ್ ಅವರು ಬವುಮಾ ಅವರನ್ನು ಕ್ಯಾಚ್ ಕೈಚೆಲ್ಲಿದ್ರು. ಪರಿಣಾಮ, ಬವುಮಾ ಅರ್ಧಶತಕ ದಾಖಲಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.


ಅಷ್ಟಕ್ಕೂ ತೆಂಬಾ ಬವುಮಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕನಾಗಿದ್ದೇ ಅಚ್ಚರಿ. ಹರಿಣಗಳ ದೇಶದಲ್ಲಿ ಕಪ್ಪು ವರ್ಣೀಯರು ಮೂಲ ನಿವಾಸಿಗಳಾಗಿದ್ರೂ ಅವರು ಜೀತದಾಳುಗಳೇ. ಹಾಗೇ ಕ್ರಿಕೆಟ್ ತಂಡದಲ್ಲಿ ಕೋಟಾದಡಿಯಲ್ಲಿ ಸ್ಥಾನ ನೀಡಲಾಗುತ್ತಿತ್ತು. ಅದರಲ್ಲೂ ಬಿಳಿಯ ಆಟಗಾರರ ಪ್ರಭಾವದ ನಡುವೆಯೂ ದಕ್ಷಿಣ ಆಫ್ರಿಕಾದ ಬುಡಕಟ್ಟು ಸಮುದಾಯದ ಬವುಮಾಗೆ ನಾಯಕತ್ವ ಒಲಿದು ಬಂದಿರುವುದು ಆತನ ಪ್ರತಿಭೆ, ಸಾಮರ್ಥ್ಯದಿಂದಲೇ ಹೊರತು ಯಾವುದೇ ಮೀಸಲಾತಿ ಕೋಟಾದಿಂದ ಅಲ್ಲ. ಇಂದಿಗೂ ವರ್ಣಭೇಧದ ಸಂಘರ್ಷ ನಡೆಯುತ್ತಿದ್ರೂ ಹರಿಣಗಳ ತಂಡವನ್ನು ಒಗ್ಗಟ್ಟಿನಿಂದ ಮುನ್ನಡೆಸಿ ಐಸಿಸಿ ಟ್ರೋಫಿ ಗೆದ್ದಿರುವುದು ಬವುಮಾನ ಅಪ್ರತಿಮ ಸಾಧನೆ. ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪುವರ್ಣೀಯ ಬೌಲರ್‌ಗಳು ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಒಬ್ಬ ಬ್ಯಾಟರ್ ಆಗಿ, ತಂಡದ ನಾಯಕನಾಗಿ ಕಪ್ಪುವರ್ಣೀಯ ಆಟಗಾರ ತಂಡವನ್ನು ಮುನ್ನಡೆಸಿದ್ದು ಇದೇ ಮೊದಲ ಬಾರಿ. ಐಸಿಸಿ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯೂ ಮೊದಲ ಸಲ.


ನಿಜ, ತೆಂಬಾ ಬವುಮಾ ತನ್ನ ಕ್ರಿಕೆಟ್ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. 5.4 ಅಡಿ ಎತ್ತರವಿದ್ರೂ ಬವುಮಾನನ್ನು ಕುಳ್ಳ ಎಂದು ತಮಾಷೆ ಮಾಡುತ್ತಿದ್ದರು. ನೋಡೋಕೆ ಚೆನ್ನಾಗಿಲ್ಲ ಅಂತ ಕುರೂಪಿ ಅಂತ ಕರೆಯುತ್ತಿದ್ರು. ನಡೆಯುವ ಶೈಲಿಯನ್ನು ಗೇಲಿ ಮಾಡುತ್ತಿದ್ರು. ಮೀಸಲಾತಿ ಕೋಟದಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಬೈಯುತ್ತಿದ್ರು. ತಂಡದ ನಾಯಕನಾಗಿದ್ರೂ ಕಪ್ಪು ವರ್ಣೀಯ ಅಂತ ಜರಿಯುತ್ತಿದ್ರು. ಫಾರ್ಮ್ ಕಳೆದುಕೊಂಡಾಗ ಅಪಮಾನ ಮಾಡುತ್ತಿದ್ದರು. ಅದ್ಭುತ ಪ್ರದರ್ಶನ ನೀಡುತ್ತಿದ್ರೂ ಯಾರು ಕೂಡ ಕೊಂಡಾಡುತ್ತಿರಲಿಲ್ಲ. ಪ್ರತಿ ಹೆಜ್ಜೆಯಲ್ಲೂ ಅವಮಾನ, ನಿಂದನೆ, ಟೀಕೆ, ಆರೋಪಗಳನ್ನು ಎದುರಿಸಿಕೊಂಡೇ ಆಟವಾಡುತ್ತಿದ್ದ. ಆದ್ರೆ ಎಲ್ಲದಕ್ಕೂ ಮೌನವಾಗಿದ್ದುಕೊಂಡೇ ಉತ್ತರ ನೀಡುತ್ತಿದ್ದ ತೆಂಬಾ ಬವುಮಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅಪ್ರತಿಮ ನಾಯಕನಾಗಿರುವುದು ಒಂದು ಬುಡಕಟ್ಟು ಸಮುದಾಯದ ಯುವಕನ ತಾಕತ್ತು, ಪ್ರತಿಭೆ ಮತ್ತ ಕಿಚ್ಚು ಎಂಬುದುರಲ್ಲಿ ಅನುಮಾನವೇ ಇಲ್ಲ.


ಒಂದು ವಿಚಾರ ಗೊತ್ತಿರಲಿ..ಇವತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಚಾಂಪಿಯನ್ ಆಗಿರುವುದು ಸಹಜವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮದ ದಿನ. ಆದ್ರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಹರಿಣಗಳು ಚಾಂಪಿಯ ನ್‍ಪಟ್ಟಕ್ಕೇರಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾವೇ ಗೆಲ್ಲಬೇಕು ಎಂದು ಬೆಂಬಲ ನೀಡಿದ್ದಾರೆ. ಯಾಕಂದ್ರೆ ಚೋಕರ್ಸ್ ಎಂಬ ಕಪ್ಪು ಚುಕ್ಕೆ ಮಾಯವಾಗಬೇಕು ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಭಿಲಾಷೆಯೂ ಆಗಿತ್ತು. ಜೊತೆಗೆ ಭಾರತದ ವಿರುದ್ಧ ಆಡುತ್ತಿಲ್ಲ… ಆಸೀಸ್ ತಂಡ ಗೆಲ್ಲಬಾರದು ಎಂಬುದು ಮನದಾಸೆಯೂ ಆಗಿತ್ತು. ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಅದೊಂದು ರೀತಿಯ ಬಾಂಧವ್ಯ ಇದೆ. ಅದು ಗಾಂಧೀಜಿಯಿಂದ ಹಿಡಿದು ನೆಲ್ಸನ್ ಮಂಡೆಲಾ ತನಕ, ಪ್ರಸಕ್ತ ರಾಜಕೀಯ ಸಂಬಂಧವೂ ಚೆನ್ನಾಗಿಯೇ ಇದೆ. ಹಾಗೇ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಜೊತೆಗೂ ಉತ್ತಮವಾದ ಸಂಬಂಧವಿದೆ. ಐಸಿಸಿ ಅಂಗಣದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಬೆಂಬಲವಾಗಿ ನಿಲ್ಲುತ್ತದೆ. ಹಾಗೇ ನೋಡಿದ್ರೆ, ಇವತ್ತು ಬಿಸಿಸಿಐ ಕುಬೇರನಾಗಿ ಮೆರೆಯುತಿರುವುದಕ್ಕೆ ಪ್ರಮುಖ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಆಲಿ ಬಾಚರ್. 1991ರ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದಿಂದ ದುಡ್ಡು ಮಾಡಬಹುದು ಎಂಬುದನ್ನು ಮೊದಲು ಹೇಳಿಕೊಟ್ಟಿದ್ದೇ ಆಲಿ ಬಾಚರ್. ಆಗಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಬಳಿ ನೇರ ಪ್ರಸಾರದ ಹಕ್ಕನ್ನು ಮಾರಾಟ ಮಾಡುವಂತೆ ಸಲಹೆ ನೀಡಿದ್ದು ಸಹ ಆಲಿ ಬಾಚರ್. ದೂರದರ್ಶನಕ್ಕೆ ಉಚಿತವಾಗಿ ನೇರ ಪ್ರಸಾರದ ಹಕ್ಕನ್ನು ನೀಡುತ್ತಿದ್ದೇವೆ ಎಂದ ದಾಲ್ಮಿಯಗೆ ನೇರಪ್ರಸಾರದಿಂದ ದುಡ್ಡು ಹರಿದು ಬರುತ್ತೆ ಎಂಬುದರ ರಹಸ್ಯವನ್ನು ತಿಳಿಸಿಕೊಟ್ಟಿದ್ದಲ್ಲದೆ ಅದಕ್ಕೊಂದು ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿಕೊಟ್ಟಿದ್ದು ಆಲಿ ಬಾಚರ್.


ಅದೇನೇ ಇರಲಿ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಜಗತ್ತಿನಲ್ಲಿ ಇಂದು ಹಬ್ಬದ ದಿನ. 44 ವರ್ಷಗಳ ಅಪಮಾನ. 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದ ಹರಿಣಗಳ ಖುಷಿಯನ್ನು ವರ್ಣಿಸಲು ಅಸಾಧ್ಯ. ಇನ್ನು ಮುಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಚೋಕರ್ಸ್ ಅಲ್ಲ.. ಚಾಂಪಿಯನ್ಸ್.. ಚೋಕರ್ಸ್ ಅನ್ನೋ ಹಣೆಪಟ್ಟಿ ಕಳಚಿ ಬಿದ್ದಿದೆ. ಇನ್ನು ಮುಂದೆ ಹರಿಣಗಳ ಹವಾ ಜೋರಾಗಲಿದೆ.. ಇರಲಿ ಎಚ್ಚರ.. ಹಗುರವಾಗಿ ಪರಿಗಣಿಸಬೇಡಿ..!

ಸನತ್ ರೈ

ShareTweetSendShare
Join us on:

Related Posts

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 11, 2026
0

ದಿನ ಭವಿಷ್ಯ: 11-02-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗೆ ಇರುತ್ತದೆ. ಆರ್ಥಿಕವಾಗಿ ಸ್ವಲ್ಪ...

If you want lucky money to come to you, write this mantra on a white sheet of paper and keep it with you.

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

by admin
February 10, 2026
0

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

Remembering Sri Subramanya Swamy, today's accurate horoscope, you will get immense success and property benefits. 5 zodiac signs

ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ನೆನೆದು ಈ ದಿನದ ನಿಖರವಾದ ರಾಶಿಫಲ,ಅಪಾರ ಯಶಸ್ಸು ಆಸ್ತಿ ಲಾಭ ಪಡೆಯಲಿದ್ದಾರೆ 5 ರಾಶಿಗಳು

by admin
February 10, 2026
0

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ...

RSSನ ನಿರಂತರ ಶ್ರಮದಿಂದಲೇ ಬಿಜೆಪಿ ಬೆಳೆದಿದೆ – ಮೋಹನ್ ಭಾಗವತ್

RSSನ ನಿರಂತರ ಶ್ರಮದಿಂದಲೇ ಬಿಜೆಪಿ ಬೆಳೆದಿದೆ – ಮೋಹನ್ ಭಾಗವತ್

by Shwetha
February 10, 2026
0

ಭಾರತೀಯ ಜನತಾ ಪಕ್ಷ (BJP) ಅಧಿಕಾರಕ್ಕೆ ಬರಲು ಮತ್ತು ‘ಅಚ್ಛೇ ದಿನ್’ ಎಂಬ ಮಾತು ಸಾಕಾರಗೊಳ್ಳಲು ದಶಕಗಳಿಂದ RSS ಕಾರ್ಯಕರ್ತರು ನಡೆಸಿದ ನಿರಂತರ ಪರಿಶ್ರಮ ಮತ್ತು ಸೈದ್ಧಾಂತಿಕ...

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ರಾಜ್ಯ ರಾಜಕಾರಣ: HD ಕುಮಾರಸ್ವಾಮಿ ಮಹತ್ವದ ಹೇಳಿಕೆ, ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು

by Shwetha
February 10, 2026
0

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಸಮಯ ಬಂದಾಗ ತಾನು ರಾಜ್ಯ ರಾಜಕೀಯಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram