ADVERTISEMENT
Wednesday, September 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಅಪರಾಧ

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

Shwetha by Shwetha
September 16, 2026
in ಅಪರಾಧ, Crime, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ಹಗರಣದ ರೂವಾರಿ, ವಿಧಾನಸೌಧದ ಕಾರಿಡಾರ್‌ಗಳಲ್ಲಿ ದರ್ಬಾರ್ ನಡೆಸುತ್ತಿದ್ದ ಬಸವರಾಜ್ ಕನ್ನಾಳೆ ಎಂಬ ಸಾಮಾನ್ಯ ವ್ಯಕ್ತಿ ಕೇವಲ ಐದು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿಗಳ ಅಧಿಪತಿಯಾಗಿ ಬೆಳೆದ ಕಥೆ ಈಗ ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಒಬ್ಬ ಸಾಮಾನ್ಯ ಉದ್ಯೋಗಾಕಾಂಕ್ಷಿಯಾಗಿದ್ದವನು ರಾಜ್ಯದ ಅತಿದೊಡ್ಡ ನೇಮಕಾತಿ ದಂಧೆಯ ಕಿಂಗ್‌ಪಿನ್ ಆಗಿ ಬದಲಾದ ರೋಚಕ ಇತಿಹಾಸ ಇಲ್ಲಿದೆ.

ದಲ್ಲಾಳಿಯ ದರ್ಬಾರ್

Related posts

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

September 16, 2026
ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಮಹತ್ವದ ಹೆಜ್ಜೆ: ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಮಾಡಲು ಮೆಟಾ ಒಪ್ಪಿಗೆ

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಮಹತ್ವದ ಹೆಜ್ಜೆ: ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಮಾಡಲು ಮೆಟಾ ಒಪ್ಪಿಗೆ

September 16, 2026

ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಬಸವರಾಜ್ ಕನ್ನಾಳೆ, ಮೈಸೂರಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತು ದೆಹಲಿಗೆ ಹಾರಿದ್ದ. ಆದರೆ ಅಲ್ಲಿ ಸಿಕ್ಕಿದ್ದು ನಾಗರಿಕ ಸೇವೆಯ ಜ್ಞಾನಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರದ ಅಡ್ಡಹಾದಿಗಳು. ದೆಹಲಿಯ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯುವಾಗಲೇ ವ್ಯವಸ್ಥೆಯ ಓರೆಕೋರೆಗಳನ್ನು ಬಳಸಿಕೊಂಡು ಹೇಗೆ ಹಣ ಮಾಡಬಹುದು ಎಂಬ ಅಕ್ರಮ ವಿದ್ಯೆಯನ್ನು ಈತ ಕರಗತ ಮಾಡಿಕೊಂಡಿದ್ದ. ಇದೇ ಜ್ಞಾನವನ್ನು ಬಳಸಿಕೊಂಡು ಕರ್ನಾಟಕಕ್ಕೆ ವಾಪಸಾದ ಕನ್ನಾಳೆ, ರಾಜಕೀಯ ನಾಯಕರ ಆಪ್ತ ವಲಯಕ್ಕೆ ಲಗ್ಗೆ ಇಟ್ಟಿದ್ದ.

ರಾಜಕೀಯ ನಂಟು

ಮೈಸೂರು ಭಾಗದ ಪ್ರಭಾವಿ ಶಾಸಕರೊಬ್ಬರ ಪುತ್ರನ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕನ್ನಾಳೆ, ಮೊದಲು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ. ನಂತರ ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸಿ ಬಿಜೆಪಿ ಕಡೆಗೆ ವಾಲಿ, 2018ರಲ್ಲಿ ಬೀದರ್ ಭಾಗದ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ ನೇಮಕಗೊಂಡಿದ್ದ. ಇದೇ ಈತನ ಜೀವನದ ಗತಿಯನ್ನೇ ಬದಲಿಸಿತು. ಶಾಸಕರ ಪಿಎ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಧಾನಸೌಧದ ಶಕ್ತಿ ಸೌಧದಲ್ಲಿ ಅಧಿಕಾರಿಗಳ ಮೇಲೆ ಸವಾರಿ ಮಾಡಲು ಶುರು ಮಾಡಿದ್ದ. ಫೈಲ್ ಹಿಡಿದು ಓಡಾಡುತ್ತಿದ್ದ ಈತ, ಮೆಲ್ಲನೆ ವರ್ಗಾವಣೆ ಮತ್ತು ನೇಮಕಾತಿ ದಂಧೆಯ ಮಧ್ಯವರ್ತಿಯಾಗಿ ಬೆಳೆದಿದ್ದ.

ಐಎಎಸ್ ಅಧಿಕಾರಿಗಳ ಜತೆ ಸೇರ ನೂರಾರು ಕೋಟಿ ಲೂಟಿ

ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ದುಬಾರಿ ಉಡುಗೊರೆ, ಪಂಚತಾರಾ ಹೋಟೆಲ್‌ಗಳಲ್ಲಿ ಮೋಜು ಮಸ್ತಿ ಕೂಟಗಳನ್ನು ಆಯೋಜಿಸುತ್ತಿದ್ದ ಕನ್ನಾಳೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿದಂತೆ ಹಲವು ಉನ್ನತಾಧಿಕಾರಿಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಕೆಪಿಎಸ್‌ಸಿ ಸದಸ್ಯರನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟು ಪ್ರಭಾವಶಾಲಿಯಾಗಿದ್ದ ಈತ, ನೂರಾರು ಅಭ್ಯರ್ಥಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ. ಸಿಐಡಿ ತನಿಖೆಯ ವೇಳೆ ಈತ ಕೇವಲ ಐದು ವರ್ಷಗಳಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಸ್ಫೋಟಕ ಸತ್ಯ ಬಯಲಾಗಿದೆ.

ಕಪ್ಪು ಹಣ ಬಿಳಿ ಮಾಡಲು ರಿಯಲ್ ಎಸ್ಟೇಟ್ ಮತ್ತು ಟ್ರಾವೆಲ್ಸ್ ದಂಧೆ

ನೇಮಕಾತಿ ಹಗರಣದಿಂದ ಬಂದ ಹಣವನ್ನು ಕನ್ನಾಳೆ ಕೇವಲ ಬ್ಯಾಂಕ್‌ನಲ್ಲಿ ಇಡಲಿಲ್ಲ. ಅದನ್ನು ಬಿಳಿ ಮಾಡಲು ಟ್ರಾವೆಲ್ಸ್ ಬಿಸಿನೆಸ್, ರಿಯಲ್ ಎಸ್ಟೇಟ್ ಮತ್ತು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದ. ಪ್ರಭಾವಿ ರಾಜಕಾರಣಿಗಳ ಬೇನಾಮಿ ಆಸ್ತಿಗಳ ನಿರ್ವಹಣೆಯಲ್ಲೂ ಈತನ ಕೈವಾಡವಿದೆ ಎಂಬ ಸಂಶಯ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಜೊತೆ ಸ್ನೇಹ ಹೊಂದಿದ್ದ ಈತ, ವ್ಯವಸ್ಥೆಯನ್ನು ತನ್ನಿಷ್ಟದಂತೆ ಕುಣಿಸುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಪರಪ್ಪನ ಅಗ್ರಹಾರದ ಕತ್ತಲೆಯಲ್ಲಿ ಕುಬೇರ

ಸದ್ಯ ಸಿಐಡಿ ಅಧಿಕಾರಿಗಳ ಸುದೀರ್ಘ ವಿಚಾರಣೆಯ ಬಳಿಕ ಸತ್ಯ ಒಪ್ಪಿಕೊಂಡಿರುವ ಬಸವರಾಜ್ ಕನ್ನಾಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ಈ ಕೋಟಿ ಕುಬೇರ ಈಗ ಪರಪ್ಪನ ಅಗ್ರಹಾರದ ಕಂಬಿ ಎಣಿಸುತ್ತಿದ್ದಾನೆ. ಈತನ ಜಾಲದಲ್ಲಿ ಇನ್ನೂ ಎಷ್ಟು ಅಧಿಕಾರಿಗಳು ಮತ್ತು ರಾಜಕಾರಣಿಗಳಿದ್ದಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ಸಿಐಡಿ ತನಿಖೆ ತೀವ್ರಗೊಂಡಂತೆ ಇನ್ನೂ ಅನೇಕ ದೊಡ್ಡ ತಲೆಗಳು ಉರುಳುವ ಸಾಧ್ಯತೆ ದಟ್ಟವಾಗಿದೆ.

ShareTweetSendShare
Join us on:

Related Posts

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

by Shwetha
September 16, 2026
0

ರಾಜ್ಯದ ಬಡ ಮತ್ತು ಅಗತ್ಯವಿರುವ ಜನರಿಗೆ ಆಹಾರ ಭದ್ರತೆ ಒದಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ...

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಮಹತ್ವದ ಹೆಜ್ಜೆ: ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಮಾಡಲು ಮೆಟಾ ಒಪ್ಪಿಗೆ

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಮಹತ್ವದ ಹೆಜ್ಜೆ: ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಮಾಡಲು ಮೆಟಾ ಒಪ್ಪಿಗೆ

by Shwetha
September 16, 2026
0

ಮಕ್ಕಳನ್ನು ಆನ್‌ಲೈನ್‌ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಇತರ ಅಪಾಯಕಾರಿ ಚಟುವಟಿಕೆಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ...

ನನಗೆ ಮುಸ್ಲಿಮರೇ ಮೊದಲು: ಕಲಾವಿದನಿಗೆ ಒಂದು ಧರ್ಮದ ಹಂಗೇಕೆ? ಬಿಗ್ ಸ್ಟಾರ್ ಬೋಳಾರ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್

ನನಗೆ ಮುಸ್ಲಿಮರೇ ಮೊದಲು: ಕಲಾವಿದನಿಗೆ ಒಂದು ಧರ್ಮದ ಹಂಗೇಕೆ? ಬಿಗ್ ಸ್ಟಾರ್ ಬೋಳಾರ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್

by Shwetha
September 16, 2026
0

ಮಂಗಳೂರು: ತುಳು ಚಿತ್ರರಂಗ ಹಾಗೂ ನಾಟಕ ರಂಗದ ಧ್ರುವತಾರೆ, ಜನಪ್ರಿಯ ಹಾಸ್ಯ ನಟ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಈಗ ಕರಾವಳಿ ಭಾಗದಲ್ಲಿ...

dk-shivakumar-statement-kpsc-scam-kumaraswamy-bjp

ಹಗರಣಗಳ ವಿರುದ್ಧ ದಾಖಲೆಗಳ ಸಮರ: ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದ ಕುಮಾರಸ್ವಾಮಿ

by Shwetha
September 16, 2026
0

ರಾಜ್ಯ ಸರ್ಕಾರದ ವಿರುದ್ಧ ತಾನು ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಹೊಂದಿದ್ದು, ಸಂಪೂರ್ಣ ಸಿದ್ಧತೆಯೊಂದಿಗೆ ಜನರ ಮುಂದೆ ಬರುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹೊಳೆನರಸೀಪುರ...

ಸತೀಶ್ ಜಾರಕಿಹೊಳಿ ವಿಕೆಟ್ ಪಡೆಯಲು ಬಿಜೆಪಿ ಮಾಸ್ಟರ್ ಪ್ಲಾನ್: ಕಾಂಗ್ರೆಸ್ ನಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದವರು ಯಾರು?-ಬಿ ನಾಗೇಂದ್ರ ಆಯ್ತು ಈಗ ಸತೀಶ್ ಜಾರಕಿಹೊಳಿ ಸರದಿ: ಸಂಪುಟದಿಂದ ಮತ್ತೊಂದು ವಿಕೆಟ್ ಪತನವಾಗುತ್ತಾ?.

ಸತೀಶ್ ಜಾರಕಿಹೊಳಿ ವಿಕೆಟ್ ಪಡೆಯಲು ಬಿಜೆಪಿ ಮಾಸ್ಟರ್ ಪ್ಲಾನ್: ಕಾಂಗ್ರೆಸ್ ನಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದವರು ಯಾರು?-ಬಿ ನಾಗೇಂದ್ರ ಆಯ್ತು ಈಗ ಸತೀಶ್ ಜಾರಕಿಹೊಳಿ ಸರದಿ: ಸಂಪುಟದಿಂದ ಮತ್ತೊಂದು ವಿಕೆಟ್ ಪತನವಾಗುತ್ತಾ?.

by Shwetha
September 16, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಿ ನಾಗೇಂದ್ರ ಅವರ ಬಳಿಕ ಈಗ ಮತ್ತೊಂದು ಪ್ರಮುಖ ವಿಕೆಟ್ ಪತನವಾಗುವ ಮುನ್ಸೂಚನೆ ಸಿಗುತ್ತಿದೆ. ಲೋಕಸೇವಾ ಆಯೋಗದ ಅಕ್ರಮ ಮತ್ತು ವಾಲ್ಮೀಕಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram