10ಕ್ಕಿಂತ ಹೆಚ್ಚು ಸಪ್ಲೈ ಚೈನ್ ಹೊಂದಿರುವ ರೆಸ್ಟೋರೆಂಟ್ ಗೆ ಎಫ್ಎಸ್ಎಸ್ಎಐ ನಿಂದ ಹೊಸ ರೂಲ್ಸ್ FSSAI new regulation
ಹೊಸದಿಲ್ಲಿ, ಡಿಸೆಂಬರ್16: ಕೋವಿಡ್-19 ಲಾಕ್ಡೌನ್ ರೆಸ್ಟೋರೆಂಟ್ ಉದ್ಯಮದ ಮೇಲೆ ಮಾನವಕುಲದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಪ್ರಭಾವ ಬೀರಿದೆ. FSSAI new regulation
ಹೊಸ ಬದಲಾವಣೆಗೆ ಕ್ರಮೇಣ ಹೊಂದಿಕೊಳ್ಳುವ ಮೂಲಕ ರೆಸ್ಟೋರೆಂಟ್ಗಳು ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿವೆ. ಹೆಚ್ಚಿನ ನಗರಗಳಲ್ಲಿ ಲಾಕ್ಡೌನ್ ತೆರವುಗೊಳಿಸಲಾಗಿದ್ದು, ರೆಸ್ಟೋರೆಂಟ್ಗಳು ಸೇವೆಗಳಿಗಾಗಿ ಜನರನ್ನು ಸ್ವಾಗತಿಸುತ್ತಿವೆ.
ಸಾಮಾಜಿಕ ದೂರ ಮತ್ತು ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ರೆಸ್ಟೋರೆಂಟ್ಗಳು ತಮ್ಮ ಗ್ರಾಹಕರಿಗೆ ಆಹಾರ ಸೇವನೆ ಸುರಕ್ಷಿತವಾಗಿಸಲು ಹೊಸ ಮತ್ತು ನವೀನ ಉಪಕ್ರಮಗಳನ್ನು ಪರಿಚಯಿಸುವ ಮೂಲಕ ದಾರಿ ಮಾಡಿಕೊಡುತ್ತಿವೆ.
ರೈತರು ಪಿಜ್ಜಾ ತಿನ್ನುತ್ತಿರುವ ಬಗ್ಗೆ ಸುದ್ದಿ ಮಾಡುತ್ತಿರುವವರಿಗೆ ನಟ ದಿಲ್ಜಿತ್ ದೋಸಾಂಜ್ ಖಡಕ್ ಪ್ರತಿಕ್ರಿಯೆ
ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್ಎಸ್ಎಸ್ಎಐ) ಹೊಸ ನಿಯಂತ್ರಣವನ್ನು ಪರಿಚಯಿಸಿದೆ. ಇದರಲ್ಲಿ 10 ಕ್ಕಿಂತ ಹೆಚ್ಚು ಸಪ್ಲೈ ಚೈನ್ ಹೊಂದಿರುವ ರೆಸ್ಟೋರೆಂಟ್ ಕಂಪನಿಗಳು ತಮ್ಮ ಮೆನು ಕಾರ್ಡ್ನಲ್ಲಿ ಸೇವೆಯ ಗಾತ್ರ, ಸೇವೆಗೆ ಕ್ಯಾಲೊರಿಫಿಕ್ ಮೌಲ್ಯ ಮತ್ತು ಅಲರ್ಜಿನ್ ಅನ್ನು ನಮೂದಿಸಬೇಕಾಗುತ್ತದೆ. ಪ್ರಸ್ತುತ ಹೊಸ ನಿಯಂತ್ರಣವು ಸ್ವಯಂಪ್ರೇರಿತ ಕ್ರಮವಾಗಿದೆ. ಆದರೆ ಇದನ್ನು ಜನವರಿ 1, 2022 ರಿಂದ ಕಡ್ಡಾಯಗೊಳಿಸಲಾಗುತ್ತದೆ.
ಎಫ್ಎಸ್ಎಸ್ಎಐ ಸಿಇಒ ಅರುಣ್ ಸಿಂಘಾಲ್, ನಾವು ಜನರನ್ನು ಸರಿಯಾದ ಮತ್ತು ಆರೋಗ್ಯಕರ ಆಹಾರದತ್ತ ಗಮನಹರಿಸಿದ್ದು, ಅವರು ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಿದ್ದಾರೆಂದು ತಿಳಿಯುವುದು ಗ್ರಾಹಕರ ಹಕ್ಕು ಎಂದು ಹೇಳಿದರು. ಆದಾಗ್ಯೂ, ಉದ್ಯಮದ ಮಂದಿ ಈ ನಿಯಮಗಳ ಅನುಷ್ಠಾನ ಕಠಿಣವಾಗಿದ್ದು, ಸ್ವಯಂಪ್ರೇರಿತವಾಗಿರಬೇಕು ಎಂದು ಹೇಳಿದ್ದಾರೆ.
HRAWI ಅಧ್ಯಕ್ಷ ಗುರ್ಬಾಕ್ಸಿಶ್ ಸಿಂಗ್ ಕೊಹ್ಲಿ, ಹೊಸ ನಿಯಂತ್ರಣವನ್ನು ರೆಸ್ಟೋರೆಂಟ್ಗಳ ವಿರುದ್ಧ ವಿವಿಧ ಉದ್ದೇಶಗಳಿಗಾಗಿ ಬಳಸಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವತ್ರಿಕ ಅನುಷ್ಠಾನವು ಒಂದು ಸವಾಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು ಅಥವಾ 10ಕ್ಕಿಂತ ಹೆಚ್ಚು ಸಪ್ಲೈ ಚೈನ್ ಹೊಂದಿರುವ ರೆಸ್ಟೋರೆಂಟ್ ಗೆ ಮಾತ್ರ ಸೀಮಿತಗೊಳಿಸುವುದರಲ್ಲಿ ಅರ್ಥವಿಲ್ಲ ಮತ್ತು ಅದು ಸ್ಪೆಕ್ಟ್ರಮ್ನಾದ್ಯಂತ ಇರಬೇಕು ಎಂದು ಅವರು ಹೇಳಿದರು.
ಅದರ ಪ್ರಾಯೋಗಿಕತೆಯನ್ನು ಅಳೆಯಲು ಕನಿಷ್ಠ ಒಂದು ವರ್ಷದವರೆಗೆ ಈ ಕ್ರಮವನ್ನು ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಬೇಕು ಎಂದು ಸಿಂಘಾಲ್ ಸೂಚಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳುhttps://t.co/y67YjE7rOw
— Saaksha TV (@SaakshaTv) December 15, 2020
ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳುhttps://t.co/JUsVugINo3
— Saaksha TV (@SaakshaTv) December 15, 2020