ಶತಕದತ್ತ ಪೆಟ್ರೋಲ್ ಬೆಲೆ : ಯಾರು ಕಮಕ್ ಕಿಮಕ್ ಎನ್ನುತ್ತಿಲ್ಲವೇಕೆ..?
ನವದೆಹಲಿ : ದೇಶದಾದ್ಯಂತ ಎರಡು ದಿನಗಳ ಬಳಿಕ ಮತ್ತೆ ಇಂಧನ ಬೆಲೆ ಹೆಚ್ಚಳವಾಗಿದೆ.
ಮುಂಬೈ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ದಾಖಲೆಯ ಗರಿಷ್ಠ 92.04 ರೂಪಾಯಿಯಷ್ಟಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ 100ರೂಪಾಯಿ ಆಗುವ ಎಲ್ಲ ಸಾಧ್ಯಗಳಿವೆ. ಇನ್ನು ಡೀಸೆಲ್ ದರ 82.40 ರೂ.ನಷ್ಟಿದೆ.
ಇನ್ನಿತರ ಮೆಟ್ರೋ ನಗರಗಳಲ್ಲಿಯೂ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಕೋಲ್ಕತಾ ಮತ್ತು ಹೈದರಾಬಾದ್‍ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕ್ರಮವಾಗಿ 86.87 ಮತ್ತು 88.89 ರೂ.ಗೆ ತಲುಪಿದೆ. ಅದೇ ರೀತಿ ಡೀಸೆಲ್ ಕ್ರಮವಾಗಿ ಲೀಟರ್‍ಗೆ 79.23 ಮತ್ತು 82.53 ರೂ.ಯಷ್ಟಾಗಿದೆ.
ದರ ಹೆಚ್ಚಳಕ್ಕೆ ಕಾರಣವೇನು?
ಈ ತಿಂಗಳ ಆರಂಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಸುಮಾರು ಒಂದು ತಿಂಗಳ ಅವಧಿಯ ನಂತರ ದೈನಂದಿನ ಬೆಲೆ ಪರಿಷ್ಕರಣೆ ಪುನರಾರಂಭಿಸಿವೆ.
ಜನವರಿ 6ರಿಂದ ಪೆಟ್ರೋಲ್ 1.74 ರೂ ಮತ್ತು ಡೀಸೆಲ್ 1.76 ರೂ.ಯಷ್ಟು ಹೆಚ್ಚಳವಾಗಿದೆ.
ಇದಲ್ಲದೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿದ್ದು, ಸ್ಥಳೀಯ ಚಿಲ್ಲರೆ ತೈಲದ ದರದಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಲಾ 26 ಪೈಸೆ ಏರಿಕೆ ಕಂಡು ಕ್ರಮವಾಗಿ 88.33 ಮತ್ತು 80.26 ರೂ.ಯಲ್ಲಿ ಮಾರಾಟ ಆಗುತ್ತಿವೆ.
ದೇಶದಲ್ಲಿ ಪದೇ ಪದೇ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದರೂ ಯಾರೊಬ್ಬರು ಕೂಡ ಈ ಬಗ್ಗೆ ತಲೆಕಡೆಸಿಕೊಳ್ಳುತ್ತಿಲ್ಲ. ಯುಪಿಎ ಅಧಿಕಾರದಲ್ಲಿದ್ದಾಗ ತೈಲ ಬೆಲೆ ವಿಚಾರವಾಗಿ ಬಿಜೆಪಿ ಹೋರಾಟ ಮಾಡಿತ್ತು.
ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್, ಡಿಸೇಲ್ ನೀಡುವುದಾಗಿ ಘೋಷಿಸಿತ್ತು. ಆದ್ರೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ್ರೂ ಕೊಟ್ಟ ಮಾತನ್ನ ಬಿಜೆಪಿ ನಾಯಕರು ಉಳಿಸಿಕೊಂಡಿಲ್ಲ.
ಇದು ಒಂದು ಕಡೆಯಾದ್ರೆ ವಿಪಕ್ಷವಾದರೂ ಈ ಬಗ್ಗೆ ಧ್ವನಿ ಎತ್ತುತಿದ್ಯಾ ಅಂದ್ರೆ ಅದೂ ಇಲ್ಲ. ತನ್ನದೇ ಸಮಸ್ಯೆಗಳಿಂದ ಒದ್ದಾಡುತ್ತಿದೆ. ಟೀಕೆ ಮಾಡಿದ್ರೂ ವಿರೋಧ ಪಕ್ಷವಾಗಿ ರಚನಾತ್ಮಕ ಟೀಕೆ ಮಾಡೋದನ್ನ ಮರೆತು ಬಿಟ್ಟಿದೆ. ಈ ಎಲ್ಲದರ ಮಧ್ಯೆ ಜನ ಸಾಮಾನ್ಯರು ಮಾತ್ರ ಬಳಲಿ ಹೋಗುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









