ಬಸವಕಲ್ಯಾಣದ `ಅನುಭವ ಮಂಟಪ’ದ ವಿಶೇಷತಗಳೇನು : ಸಂಪೂರ್ಣ ವಿವರ
ಬೀದರ್ : ವಚನ ಚಳವಳಿಯ ರೂವಾರಿ, ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನ ಅನುಭವ ಮಂಟಪದ ಭೂಮಿ ಪೂಜೆ ನೇರವೇರಿಸಿದ್ದಾರೆ.
ಜಗತ್ತಿನ ಮೊದಲ ಪಾರ್ಲಿಮೆಂಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಭವ ಮಂಟಪದ ಭವ್ಯ ಕಟ್ಟಡವನ್ನು ಹೇಗೆ ನಿರ್ಮಿಸಲಾಗುತ್ತೆ? ಇದರ ನೀಲಾನಕ್ಷೆ ಹೇಗಿದೆ? ನೂತನ ಅನುಭವ ಮಂಟಪದ ವಿಶೇಷತೆಗಳೇನು..?
ಎಷ್ಟು ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತೆ ಅನ್ನೋ ಸಂಪೂರ್ಣ ವಿವರ ಹೀಗಿದೆ..
ಬರೋಬ್ಬರಿ 500 ಕೋಟಿ ವೆಚ್ಚದಲ್ಲಿ ನಿರ್ಮಾಣ
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನ ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು 25 ಎಕರೆಗಳಷ್ಟು ಜಾಗವನ್ನ ಮೀಸಲಿಡಲಾಗಿದೆ. 7.5 ಎಕರೆ ವಿಸ್ತೀರ್ಣದಲ್ಲಿ 182 ಅಡಿ ಎತ್ತರ, 2884 ಅಡಿ ಸುತ್ತಳತೆಯಲ್ಲಿ ಭವ್ಯ ಅನುಭವ ಮಂಟಪ ತಲೆ ಎತ್ತಲಿದೆ.
ಇನ್ನು ನೂತನ ಅನುಭವ ಮಂಟಪದಲ್ಲಿ 6 ಅಂತಸ್ತುಗಳು ಇರಲಿವೆ. ಇದಕ್ಕೆ 770 ಕಂಬಗಳು ಆಧಾರವಾಗಿರಲಿವೆ. ಈ ಕಂಬಗಳಲ್ಲಿ 12ನೇ ಶತಮಾನದಲ್ಲಿ ಮಾದರಿಯಾಗಿದ್ದ ಶರಣ, ಶರಣೆಯರ ಹೆಸರನ್ನ ಕೆತ್ತನೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.
6 ಅಂತಸ್ತುಗಳಲ್ಲಿ ಏನೇನು ಇರಲಿವೆ..?
ಕಟ್ಟಡವನ್ನು ಆರು ಅಂತಸ್ತುಗಳನ್ನ ವಿಂಗಡಣೆ ಮಾಡಲಾಗಿದೆ. ಮೊದಲ ಅಂತಸ್ತು ಭಕ್ತ ಸ್ಥಳ, 2ನೇ ಅಂತಸ್ತು ಮಹೇಶ ಸ್ಥಳ, 3ನೇ ಅಂತಸ್ತು ಪ್ರಸಾದ ಸ್ಥಳ, 4ನೇ ಅಂತಸ್ತು ಪ್ರಾಣಲಿಂಗ ಸ್ಥಳ, 5ನೇ ಅಂತಸ್ತು ಶರಣ ಸ್ಥಳ, 6ನೇ ಅಂತಸ್ತು ಐಕ್ಯ ಸ್ಥಳಗಳಾಗಿ ವಿಂಗಡಣೆ ಮಾಡಲಾಗಿದೆ.
770 ಆಸನಗಳುಳ್ಳ ಸುಸಜ್ಜಿತ ಸಭಾ ಭವನ
ನೂತನ ಅನುಭವ ಮಂಟಪದಲ್ಲಿ 770 ಆಸನಗಳುಳ್ಳ ಸುಸಜ್ಜಿತ ಸಭಾ ಭವನ ಇದಾಗಲಿದೆ. ಕಟ್ಟಡದ ತುದಿಯಲ್ಲಿ 100 ಅಡಿ ವ್ಯಾಸದ ಬೃಹತ್ ಲಿಂಗಾಕಾರದ ಗೋಪುರ ನಿರ್ಮಾಣ ಮಾಡಲಾಗುತ್ತದೆ. ಇನ್ನು ನೆಲ ಮಾಳಿಗೆಯಲ್ಲಿ 1000 ಜನರು ಪ್ರಸಾದ ಸ್ವೀಕರಿಸುವ ದಾಸೋಹ ಭವನ ಇರಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









