ಜಿ.ಟಿ.ದೇವೆಗೌಡ ಒಬ್ಬ ಮಹಾನ್ ಸುಳ್ಳುಗಾರ : ಹೆಚ್ ಡಿ ಕುಮಾರಸ್ವಾಮಿ
ಮೈಸೂರು : ಜಿ.ಟಿ.ದೇವೆಗೌಡ ಒಬ್ಬ ಮಹಾನ್ ಸುಳ್ಳುಗಾರ. ಕುಮಾರಪರ್ವ ಹೆಸರಿಟ್ಟಿದ್ದು ನಾವು ಎಂದು ಜಿ.ಟಿ.ದೇವೇಗೌಡ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕುಮಾರಪರ್ವ ಕಾರ್ಯಕ್ರಮ ರೂಪಿಸಿದ್ದು ನಾನು ಎಂಬ ಜಿಟಿಡಿ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ.
ಕುಮಾರ ಪರ್ವ ಹೆಸರಿಟ್ಟಿದ್ದು ನಾವು. ಆತ್ಮಸಾಕ್ಷಿಯಿಂದ ಜಿ.ಟಿ.ಡಿ ತಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಲಿ. ಕುಮಾರ ಪರ್ವವನ್ನ ಪಕ್ಷ ಅಧಿಕಾರಕ್ಕೆ ತರಬೇಕೆಂದು ತಾಯಿ ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಿಸಿದ್ದು ನಿಜ.
ನನ್ನ ಆರೋಗ್ಯವೂ ಲೆಕ್ಕಿಸದೆ ಪ್ರವಾಸ ಮಾಡಿದ್ದೇನೆ. ಜಿ.ಟಿ.ದೇವೆಗೌಡ್ರು ನನ್ನ ಜೊತೆ ರಾಜ್ಯ ಸುತ್ತಿ ಪ್ರಚಾರ ಮಾಡಿದ್ರಾ ಎಂದು ಪ್ರಶ್ನಿಸಿದರು.
ಕೆ.ಆರ್.ನಗರದಲ್ಲಿ ಜಿ.ಟಿ.ದೇವೆಗೌಡ ಬಲ ಪ್ರದರ್ಶನ ಬಗ್ಗೆ ಮಾತನಾಡಿ, ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೊತೆ ಮೆರವಣಿಗೆ ಮಾಡ್ತಾರೆ.
ಹೀಗಾಗಿ ಇವರಿಗೆ ಎಷ್ಟರಟ್ಟಿಗೆ ಪಕ್ಷನಿಷ್ಟೆ ಇದೆ ಎಂದು ಟೀಕಿಸಿದರು. ಜೆಡಿಎಸ್ ಪಕ್ಷವನ್ನ ಬೆಳೆಸಿದ್ದೇನೆ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷವನ್ನ ಬೆಳೆಸಿರೋರು ಕಾರ್ಯಕರ್ತರು.
ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ, ಅವರಿಗೆ ಡ್ಯಾಮೇಜ್. 2008 ರಲ್ಲಿ ಏನಾಯ್ತು, ಡ್ಯಾಮೇಜ್ ಆಗಿದ್ದು ನಮಗಲ್ಲ. ಡ್ಯಾಮೇಜ್ ಆಗಿದ್ದು ಯಾರಿಗೆ ಅಂತ ಇತಿಹಾಸವೇ ಹೇಳುತ್ತೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಇನ್ನು ಜೆಡಿಎಸ್ ದೇವೇಗೌಡರ ಹಿಡಿತದಲ್ಲಿಲ್ಲ ಎಂಬ ಜಿಟಿಡಿ ಹೇಳಿಕೆಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ.
ನಮ್ಮ ತಂದೆಗೆ ಗೌರವ ಕೊಡೋದನ್ನ ಇವರು ಹೇಳಬೇಕಿಲ್ಲ. ನಾಲಿಗೆ ಮೇಲೆ ಹಿಡಿತ ಇರಲಿ,ನಿಮ್ಮಂತವರಿಂದಲೇ ಪಕ್ಷ ಹೀಗೆ ಆಗಿದೆ. ಜಿಟಿಡಿಗೆ ಸಹಕಾರಿ ಕ್ಷೇತ್ರವನ್ನ ಪರಿಚಯಿಸಿದ್ದೆ ನಾನು ಎಂದು ಗುಡುಗಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









