ಹಳ್ಳಿಗಳಲ್ಲಿ RO ಪ್ಲಾಂಟ್ ಗಳನ್ನ ಮಾಡಲು ನಿರ್ಧಾರ ಮಾಡಲಾಗಿದೆ. ಸ್ವಚ್ಚ ಭಾರತ ಮಿಷನ್ ಯೋಜನೆ ಮೂಲಕ ಜನರ ತಲುಪುವುದು. ನೀರು ತಲುಪಲಾಗದೆ ಬಾಕಿ ಉಳಿದಿರೋ ಹಳ್ಳಿಗಳಲ್ಲಿ ನೀರು ಪೂರೈಸಿ, ಏಜೆನ್ಸಿಗಳ ಮೂಲಕ ಮೇಂಟೆನೆನ್ಸ್ ಮಾಡುವುದು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಾ , ಈ ವಿಚಾರ ಇಂದಿನ ಸಭೆಯಲ್ಲಿ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡಿಲ್ಲ, ಆ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು. ಇನ್ನೂ ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ ಅನ್ನೋ ವಿಚಾರವಾಗಿ ಮಾತನಾಡಿ ನಾನು ಯೋಜನೆ ಆಗಲಿ ಅನ್ನೋ ಆಶಯ ವ್ಯಕ್ತಪಡಿಸ್ತೇನೆ. ಕೋರ್ಟಲ್ಲಿ ಪ್ರಕರಣ ಇದೆ. ಹಾಗಾಗಿ ನಾನು ಈ ಬಗ್ಗೆ ಮಾತನಾಡಲ್ಲ. ಎರಡೂ ರಾಜ್ಯಗಳು ಕೂತು ಮಾತನಾಡಿದ್ರೆ ಯೋಜನೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ದವಿದೆ ಎಂದಿದ್ದಾರೆ.
ಇನ್ನೂ ಉತ್ತರ ಪ್ರದೇಶ ಮತ್ತು ಮದ್ಯಪ್ರವೇಶ ನಡುವೆ ಕೂಡ ಇದೇ ರೀತಿ ಸಮಸ್ಯೆ ಇತ್ತು. ಕೆನ್ ಬೆತ್ವಾ ನದಿ ಜೋಡಣೆ ಸಮಸ್ಯೆ ಇತ್ತು. ಮಾತು ಕಥೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ರು. ಮೇಕೆದಾಟು ವಿಚಾರದಲ್ಲೂ ಮಾತು ಕಥೆ ಮೂಲಕ ಬಗೆಹರಿಸಿಕೊಳ್ಳಲಿ ಎಂದು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ಗಜೇಂದ್ರ ಸಿಂಗ್ ಶೇಖಾವತ್ ಸಲಹೆ ನೀಡಿದ್ದಾರೆ.
ಮಹದಾಯಿ ವಿಚಾರದಲ್ಲೂ ಕೂಡ ಬೇರೆ ಬೇರೆ ರೀತಿಯ ಸಮಸ್ಯೆ ಇದೆ. ಅದರ ಬಗ್ಗೆ ಕೂಡ ಚರ್ಚೆ ಮಾಡೋದಿಲ್ಲ ಎಂದಿದ್ದಾರೆ..