ಕೇಂದ್ರ ಸರ್ಕಾರ ನಗರ ಹಳ್ಳಿಗಳ ವ್ಯತ್ಯಾಸ ಕಡಿಮೆ ಮಾಡಲು ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಗ್ಯಾಸ್, ವಿದ್ಯುತ್ ಸಂಪರ್ಕ ಯೋಜನೆಗಳನ್ನ ಜಾರಿಗೊಳಿಸಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ..
ಅಲ್ಲದೇ ಉತ್ತಮ ಗುಣಮಟ್ಟದ ನೀರು ನೀಡಲು ಜಲಶಕ್ತಿ ಯೋಜನೆ ಜಾರಿಗೊಳಿಸಿದೆ. 17% ಹಿಂದೆ ನೀರನ್ನ ಮನೆಗಳಿಗೆ ತಲುಪುತ್ತಿತ್ತು. ಕೊವೀಡ್ ನಿಂದ ಯೋಜನೆ ಕುಂಠಿತ ಆಗಿತ್ತು. ಈ ಯೋಜನೆ 2024 ರೊಳಗೆ ಪೂರ್ಣಗೊಳ್ಳುತ್ತಾ ಎಂಬ ಅನುಮಾನ ಇತ್ತು. ಈಗ ಶೇ.48 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದಿದ್ದಾರೆ..
ಇಂದು ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ 8 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಜೊತೆ ಸಭೆ ನಡೆಸಲಾಗಿದೆ. ಸಭೆ ಬಬಳಿಕ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ..