ಗಾಂಧಿ ಜಯಂತಿಯಂದು ಶುಭ ಕೋರಿದ ದೇಶ ಮತ್ತು ವಿಶ್ವ ನಾಯಕರು…
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಹಾತ್ಮ ಗಾಂಧಿಯವರ 153 ನೇ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ‘ಭಾರತದ ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಾಂಧಿ ಜಯಂತಿ ಈ ವರ್ಷ ಹೆಚ್ಚು ವಿಶೇಷವಾಗಿದೆ ಎಂದು ಹೇಳಿದರು. ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸುವಂತೆ ಅವರು ನಾಗರಿಕರನ್ನು ಒತ್ತಾಯಿಸಿದರು.
ಹಲವಾರು ರಾಜಕಾರಣಿಗಳು ಮತ್ತು ವಿಶ್ವ ನಾಯಕರು ಮಹಾತ್ಮ ಗಾಂಧಿ ಹುಟ್ಟು ಹಬ್ಬಕ್ಕೆ ಶುಭಕೋರಿದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಇಂದಿನ ಸವಾಲುಗಳನ್ನು ಸೋಲಿಸಲು ಗಾಂಧಿಯವರ ಶಾಂತಿ, ಗೌರವ ಮತ್ತು ಘನತೆಯ ಮೌಲ್ಯಗಳಿಗೆ ಒತ್ತು ನೀಡಿದರು.
ಗಾಂಧಿಯವರ ಜನ್ಮದಿನವನ್ನು ಜಾಗತಿಕವಾಗಿ ಅಹಿಂಸೆಯ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ.
ಗಾಂಧಿ ಜಯಂತಿಯ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭಾಶಯ ಕೋರಿದ ಅಧ್ಯಕ್ಷೆ ದ್ರೌಪದಿ ಮುರ್ಮು, ಗಾಂಧಿಯವರ ಜೀವನದ ಮೌಲ್ಯಗಳಾದ ಶಾಂತಿ, ಸಮಾನತೆ ಮತ್ತು ಕೋಮು ಸೌಹಾರ್ದತೆಗೆ ಎಲ್ಲರೂ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಸಂದರ್ಭವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಹ ರಾಜ್‌ಘಾಟ್‌ಗೆ ಆಗಮಿಸಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನಾಚರಣೆ ಅಂಗವಾಗಿ ಮೈಸೂರಿನ ಬದನವಾಳುವಿನ ಖಾದಿ ಗ್ರಾಮೋದ್ಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಟ್ವಿಟರ್‌ನಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡ ಕಾಂಗ್ರೆಸ್ ಸಂಸದರು, “ಬಾಪು ನಮಗೆ ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯಲು ಕಲಿಸಿದರು. ಇಂದು ಗಾಂಧಿ ಜಯಂತಿಯಂದು ನಾವು ಪ್ರತಿಜ್ಞೆ ಮಾಡುತ್ತೇವೆ, ಅವರು ಅನ್ಯಾಯದ ವಿರುದ್ಧ ದೇಶವನ್ನು ಒಗ್ಗೂಡಿಸಿದಂತೆ, ನಾವು ಈಗ ನಮ್ಮ ಭಾರತವನ್ನು ಒಂದುಗೂಡಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ..
Gandhi Jayanti: PM Modi, President Murmu, UN chief pay tribute to father of the nation