ADVERTISEMENT
Wednesday, August 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ದೇಶದ ಮೊದಲ ಸ್ವಾತಂತ್ರ್ಯ ದಿನದ ಧ್ವಜಾರೋಹಣದಲ್ಲಿ ರಾಷ್ಟ್ರಪಿತ ಗಾಂಧಿ ಭಾಗಿಯಾಗಿರಲಿಲ್ಲ; ಸಂಭ್ರಮದ ದಿನವನ್ನು ಬಾಪು ಸೂತಕದ ದಿನವೆಂದು ಬಗೆದಿದ್ದು ಯಾಕೆ ಗೊತ್ತೇ?

admin by admin
August 14, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ದೇಶದ ಮೊದಲ ಸ್ವಾತಂತ್ರ್ಯ ದಿನದ ಧ್ವಜಾರೋಹಣದಲ್ಲಿ ರಾಷ್ಟ್ರಪಿತ ಗಾಂಧಿ ಭಾಗಿಯಾಗಿರಲಿಲ್ಲ; ಸಂಭ್ರಮದ ದಿನವನ್ನು ಬಾಪು ಸೂತಕದ ದಿನವೆಂದು ಬಗೆದಿದ್ದು ಯಾಕೆ ಗೊತ್ತೇ?

73 ವರ್ಷಗಳ ಹಿಂದೆ ಆಗಸ್ಟ್ 15 ರಂದು ಬ್ರಿಟಿಷರ ಆಡಳಿತದ ಅಂಧಕಾರದಿಂದ ಸ್ವಾತಂತ್ರ್ಯದ ಹೊಸ ಬೆಳಕಿಗೆ ಭಾರತ ತನ್ನನ್ನು ತೆರೆದುಕೊಂಡಿತು. ಅದರೊಂದಿಗೆ ಅವಿಭಜಿತ ಭಾರತವು ಪಾಕಿಸ್ತಾನ ಮತ್ತು ಭಾರತವೆಂದು ವಿಭಜನೆಯಾಗಿಯೂ ಬರೋಬ್ಬರಿ 73 ವರ್ಷಗಳು ಸಂದಿವೆ. ಶತಮಾನಗಳ ಕಾಲದ ಬ್ರಿಟಿಷ್ ಪ್ರಭುತ್ವಕ್ಕೆ ಕೊನೆ ಹಾಡಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ನಿರ್ಧರಿಸಿ ಹೋರಾಟ ನಡೆಸಿದುದರ ಪ್ರತಿಫಲವಾಗಿ ಬ್ರಿಟಿಷ್ ರಾಜಪ್ರಭುತ್ವವು ಆಕ್ರಮಿಸಿಕೊಂಡ ಸುದೀರ್ಘ ಶತಮಾನಗಳ ಕಾಲದ ನಂತರ ಅಂದರೆ ಆಗಸ್ಟ್ 15, 1947 ರಂದು ಗಡಿಯಾರವು 12.00 ವೇಳೆಯನ್ನು ತೋರಿಸುತ್ತಿದ್ದಂತೆ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು.

Related posts

ತಮಿಳುನಾಡು ಸದನದಲ್ಲಿ ಶೂಟೌಟ್ ಧಗಧಗ:ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!

ತಮಿಳುನಾಡು ಸದನದಲ್ಲಿ ಶೂಟೌಟ್ ಧಗಧಗ:ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!

August 19, 2026
ಮರಣದಂಡನೆಗೆ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಕೆ: ಸುಪ್ರೀಂ ಕೋರ್ಟ್

ಮರಣದಂಡನೆಗೆ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಕೆ: ಸುಪ್ರೀಂ ಕೋರ್ಟ್

August 19, 2026

ಜವಾಹರ್ ‌ಲಾಲ್ ನೆಹರುರವರು ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ತಮ್ಮ ಪ್ರಸಿದ್ಧ ‘ಟ್ರಸ್ಟ್ ವಿಥ್ ಡೆಸ್ಟಿನಿ’ ಭಾಷಣ ಮಾಡಿದರು. ಸಂಸತ್ತಿನ ಕಟ್ಟಡದಲ್ಲಿಯೂ ಸಹ ರಾತ್ರಿ ಅಧಿಕೃತ ಕಾರ್ಯ ಆರಂಭವಾಗಿತ್ತು. ಪ್ರಧಾನ ಮಂತ್ರಿಯಾಗಿ ಜವಾಹರಲಾಲ್ ನೆಹರೂ ಅವರೊಂದಿಗೆ ಸಚಿವರ ಸಂಪುಟ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಗೀತೆಯಾಗಿ ವಂದೇ ಮಾತರಂ ಹಾಡಲಾಯಿತು. (ಆಗಿನ್ನೂ ವಂದೇ ಮಾತರಂ ಹಾಡುವ ಬಗ್ಗೆ ಇನ್ನೂ ಯಾವುದೇ ವಿವಾದಗಳಿರಲಿಲ್ಲ)

ಇತ್ತ ದೇಶಕ್ಕೆ ದೇಶವೇ ಸ್ವಾತಂತ್ರ್ಯ ದೊರಕಿದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮಹಾತ್ಮಾ ಗಾಂಧೀಜಿಯವರು ಮಾತ್ರ ಕೋಲ್ಕತ್ತಾ (ಆಗಿನ ಕಲ್ಕತ್ತಾ) ದಲ್ಲಿ ತಮ್ಮ ಕೆಲವು ಆಪ್ತ ಅನುಯಾಯಿಗಳೊಂದಿಗೆ ಉಪವಾಸ ಆಚರಣೆಯಲ್ಲಿ ತೊಡಗಿದ್ದರು. ತನ್ನ ತಾಯಿನಾಡಿಗಾಗಿ ಜೀವನವನ್ನೆಲ್ಲಾ ಅರ್ಪಿಸಿದ ಗಾಂಧೀಜಿ, ಜನರು ಬೇರ್ಪಡುತ್ತಿರುವುದನ್ನು ನೋಡಿ ಮನನೊಂದಿದ್ದರು. ಭಾರತವು ವಿಭಜನೆಯಾಗುವುದಕ್ಕಾಗಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಾಯಿತು ಎಂದು ದುಃಖಿತರಾಗಿದ್ದರು.

1920 ರ ದಶಕದ ಅಸಹಕಾರ ಚಳವಳಿಯಿಂದ 1930 ರಲ್ಲಿ ಉಪ್ಪಿನ ಸತ್ಯಾಗ್ರಹದವರೆಗೆ ಗಾಂಧೀಜಿಯವರು ದಶಕಗಳವರೆಗೆ ದೇಶದಾದ್ಯಂತ ಬೃಹತ್ ಆಂದೋಲನಗಳಿಗೆ ಮುಂದಾಗಿದ್ದರು. ಭಾರತದಾದ್ಯಂತ ಲಕ್ಷಾಂತರ ಜನರಿಗೆ ಅವರು ಧ್ವನಿಯಾಗಿದ್ದರು.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬ್ರಿಟಿಷ್ ಮುಕ್ತ ಭಾರತಕ್ಕಾಗಿ ಹೋರಾಟ ನಡೆಸಿದರೆ, ಅಖಿಲ ಭಾರತ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ಬಹುಸಂಖ್ಯಾತ ರಾಜ್ಯಕ್ಕಾಗಿ ಪ್ರತಿಪಾದಿಸಿತು. ಭಾರತಕ್ಕೆ ವೈಸರಾಯ್ ಆಗಿಬಂದಿದ್ದ ಲಾರ್ಡ್ ಮೌಂಟ್‌ಬ್ಯಾಟನ್ ಪ್ರತ್ಯೇಕತೆಯನ್ನು ಘೋಷಿಸಿ 1947 ರ ಆಗಸ್ಟ್ 14 ರಂದು ಮಧ್ಯರಾತ್ರಿ ಪಾಕಿಸ್ತಾನವನ್ನು ಜಿನ್ನಾಗೆ ಮತ್ತು ಆಗಸ್ಟ್ 15 ರಂದು ಭಾರತವನ್ನು ನೆಹರೂಗೆ ಹಸ್ತಾಂತರಿಸಿದರು. ‌

ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಲು ನಿರಾಕರಿಸಿದ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ರಂದು 24 ಗಂಟೆಗಳ ಉಪವಾಸವನ್ನು ಆಚರಿಸಿದರು, ಪ್ರಾರ್ಥನೆ ಸಲ್ಲಿಸಿದರು ಮತ್ತು ಚರಕದಿಂದ ಖಾದಿ ನೂಲುಗಳನ್ನು ನೇಯ್ದು ಆ ದಿನವನ್ನು ಕಳೆದರು.
ಈ ನಡುವೆ , ಉಭಯ ರಾಷ್ಟ್ರಗಳು ವಿಭಜನೆಯಾದ ನಂತರ ಕೋಮು ಹಿಂಸಾಚಾರ ನಡೆದು‌ ಒಂದು ಮಿಲಿಯನ್ ಸಾವುಗಳಿಗೆ ಕಾರಣವಾಯಿತು. ಉಪಖಂಡದ ಹಲವಾರು ಸ್ಥಳಗಳಲ್ಲಿ ಘರ್ಷಣೆಗಳು ಭುಗಿಲೆದ್ದವು. ಬಂಗಾಳದ ಜನರು ಮತ್ತು ಮುಖಂಡರಿಂದ ಪದೇ ಪದೇ ಮನವಿಗಳನ್ನು ಸ್ವೀಕರಿಸಿದ ಮಹಾತ್ಮ ಗಾಂಧೀಜಿ ಪಶ್ಚಿಮ ಬಂಗಾಳದ(ಈಗಿನ ಬಾಂಗ್ಲಾದೇಶವೂ ಸೇರಿ) ಗಲಭೆ ಪೀಡಿತ ನಗರಕ್ಕೆ ಶಾಂತಿ ತರುವ ಪ್ರಯತ್ನದಲ್ಲಿ ಪ್ರಯಾಣಿಸಿದ್ದರು. ಮುಸ್ಲಿಮರೇ ಬಹುಸಂಖ್ಯೆಯಲ್ಲಿದ್ದ ಹೈದೇರಿ ಮಂಜಿಲ್ ಎಂಬ ಪ್ರದೇಶದಲ್ಲಿ ಗಾಂಧೀಜಿ ಕೆಲ ದಿನ ತಂಗಿದ್ದರು.

ಆ ಸಂದರ್ಭದಲ್ಲಿ ಅವರನ್ನು ‌ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯಲ್ಲಿ‌ ನೀವು ಏಕೆ ಭಾಗಿಯಾಗುತ್ತಿಲ್ಲ ಎಂದು ಕೇಳಿದಾಗ ಗಾಂಧೀಜಿ ದೇಶ ವಿಭಜನೆಯಾದ ದಿನವನ್ನು ನಾನು ಸಂಭ್ರಮಿಸಲು ಸಾಧ್ಯವಿಲ್ಲ. ಆದರೆ ನಾನು ಉಳಿದವರು ಸಂತೋಷಪಡಬಾರದು ಎಂದು ಹೇಳುವುದಿಲ್ಲ. ದುರದೃಷ್ಟವಶಾತ್ ನಮಗೆ ಇಂದು ಸಿಕ್ಕಿರುವ ಸ್ವಾತಂತ್ರ್ಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ಭವಿಷ್ಯದ ಸಂಘರ್ಷದ ಬೀಜಗಳನ್ನು ಸಹ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ದೇಶ ಎದುರಿಸಬಹುದಾದ ಸಂಘರ್ಷಗಳನ್ನು ನೆನೆದು ಆತಂಕಿತನಾಗಿದ್ದೇನೆ ಎಂದು ಉತ್ತರಿಸಿದರು. ಈ ದಿನವನ್ನು ನಾನು ಉಪವಾಸವಿದ್ದು, ಚರಕದಲ್ಲಿ ನೂಲು ನೇಯ್ದು ಪ್ರಾರ್ಥನೆಯೊಂದಿಗೆ ಆಚರಿಸುತ್ತೇನೆ ಎಂದು ಗಾಂಧೀಜಿ ಹೇಳಿದ್ದರು.

Tags: #74th Independence Day1947 august 15British ruleFirst independence dayindependenceindiaIndian historyJawaharlal Nehrumahathma gandhinews
ShareTweetSendShare
Join us on:

Related Posts

ತಮಿಳುನಾಡು ಸದನದಲ್ಲಿ ಶೂಟೌಟ್ ಧಗಧಗ:ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!

ತಮಿಳುನಾಡು ಸದನದಲ್ಲಿ ಶೂಟೌಟ್ ಧಗಧಗ:ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!

by Shwetha
August 19, 2026
0

ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣ ಇದೀಗ ಎರಡು ರಾಜ್ಯಗಳ ನಡುವೆ ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಸಂಚಲನ ಮೂಡಿಸಿದೆ. ಸ್ವಾತಂತ್ರ್ಯ...

ಮರಣದಂಡನೆಗೆ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಕೆ: ಸುಪ್ರೀಂ ಕೋರ್ಟ್

ಮರಣದಂಡನೆಗೆ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಕೆ: ಸುಪ್ರೀಂ ಕೋರ್ಟ್

by Shwetha
August 19, 2026
0

ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲು ಪ್ರಸ್ತುತ ಇರುವ ಗಲ್ಲಿಗೇರಿಸುವ ಪದ್ಧತಿಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಮರಣದಂಡನೆಯನ್ನು ಕಡಿಮೆ ನೋವಿನಿಂದ ಜಾರಿಗೊಳಿಸಲು ಮಾರಕ ಇಂಜೆಕ್ಷನ್, ಗುಂಡಿಕ್ಕುವಿಕೆ ಸೇರಿದಂತೆ...

ಪವಿತ್ರಾ ಗೌಡ ನನಗೆ ಮಗಳಿದ್ದಂತೆ, ತಪ್ಪು ಮಾಡದವರು ಯಾರೂ ಇಲ್ಲ: ಪರಪ್ಪನ ಅಗ್ರಹಾರ ಜೈಲು ಭೇಟಿ ಬಳಿಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಮಹತ್ವದ ಹೇಳಿಕೆ

ಪವಿತ್ರಾ ಗೌಡ ನನಗೆ ಮಗಳಿದ್ದಂತೆ, ತಪ್ಪು ಮಾಡದವರು ಯಾರೂ ಇಲ್ಲ: ಪರಪ್ಪನ ಅಗ್ರಹಾರ ಜೈಲು ಭೇಟಿ ಬಳಿಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಮಹತ್ವದ ಹೇಳಿಕೆ

by Shwetha
August 19, 2026
0

ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಮಹಿಳಾ ಬ್ಯಾರಕ್ ಪರಿಶೀಲನೆ ನಡೆಸಿದ್ದಾರೆ....

ತಮಿಳುನಾಡು ಸಿಎಂ ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು; ‘ನಮ್ಮ ಕೆಲಸ ನಾವು ಮಾಡುತ್ತೇವೆ’

ತಮಿಳುನಾಡು ಸಿಎಂ ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು; ‘ನಮ್ಮ ಕೆಲಸ ನಾವು ಮಾಡುತ್ತೇವೆ’

by Shwetha
August 19, 2026
0

ಹನೂರು ಶೂಟೌಟ್ ಪ್ರಕರಣದ ಕುರಿತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೀಡಿದ್ದ ಹೇಳಿಕೆಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಒಂದು ರಾಜ್ಯದ...

‘ಯೌವನ, ಹಣ, ಅಧಿಕಾರ ಒಂದೆಡೆ ಸೇರಬಾರದು; ಅದು ಅಪಾಯ’: ಡಿಕೆಶಿ

‘ಯೌವನ, ಹಣ, ಅಧಿಕಾರ ಒಂದೆಡೆ ಸೇರಬಾರದು; ಅದು ಅಪಾಯ’: ಡಿಕೆಶಿ

by Shwetha
August 19, 2026
0

ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ, ರಾಜಕೀಯ ಹಾಗೂ ಬೆಂಗಳೂರಿನ ಅಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಯೌವನ, ಹಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram