ಗಣೇಶ ವಿಸರ್ಜನೆ ವೇಳೆ ದುರಂತ – ನೀರಿನಲ್ಲಿ ಮುಳುಗಿ 6 ಮಂದಿ ಸಾವು…
ಗಣೇಶ ವಿಸರ್ಜನೆ ವೇಳೆ ದರಂತ ಘಟನೆ ನಡೆದಿದ್ದು ಗಣೇಶ ವಿಗ್ರಹಗಳನ್ನ ನೀರಿನ ಮುಳುಗಿಸುವಾಗ 6 ಮಂದಿ ಸಾವನ್ನಪ್ಪಿರುವ ಘಟನೆ ಹರಿಯಾಣ ರಾಜ್ಯದ ಮಹೇಂದರ್ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ವರದಿಯಾಗಿದೆ.
ಮಹೇಂದರ್ಗಢದಲ್ಲಿ ನಾಲ್ವರು ಯುವಕರು ಕಾಲುವೆಯಲ್ಲಿ ಮುಳುಗಿದರೆ, ಸೋನಿಪತ್ನಲ್ಲಿ ಇಬ್ಬರು ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ ಅಶೋಕ್ ಕುಮಾರ್ ಹೇಳಿದ್ದಾರೆ. ನಾಲ್ಕು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸುಮಾರು ಏಳು ಅಡಿಯ ಗಣೇಶ ವಿಗ್ರಹವನ್ನ ವಿಸರ್ಜನೆಗೆ ಕೊಂಡೊಯ್ಯುತ್ತಿದ್ದಾಗ ಮಹೇಂದರ್ಗಢದಲ್ಲಿ ಕಾಲುವೆಯಲ್ಲಿ ಒಂಬತ್ತು ಯುವಕರು ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಜಿಲ್ಲಾಡಳಿತ ಎನ್ಡಿಆರ್ಎಫ್ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ನಾಲ್ವರನ್ನ ರಕ್ಷಿಸಿದೆ ನಾಲ್ವರು ಮೃತಪಟ್ಟಿದ್ದಾರೆ.
ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಟ್ವಿಟ್ಟ ಮಾಡಿ “ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ನೀರಿನಲ್ಲಿ ಮುಳುಗಿ ಅನೇಕ ಜನರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ” ಎಂದು ಹೇಳಿದ್ದಾರೆ.
“ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಸಂತ್ರಸ್ತ ಕುಟುಂಬಗಳೊಂದಿಗೆ ನಿಂತಿದ್ದೇವೆ. NDRF ತಂಡ ಅನೇಕ ಜನರನ್ನ ರಕ್ಷಿಸಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ” ಎಂದು ಖಟ್ಟರ್ ಟ್ವೀಟ್ ಮಾಡಿದ್ದಾರೆ.
10 ದಿನಗಳ ಗಣೇಶ ಹಬ್ಬ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಹಲವಾರು ಗಣೇಶ ಮೂರ್ತಿಗಳನ್ನ ನದಿಗಳು, ಕಾಲುವೆಗಳು ಮತ್ತು ಇತರ ಜಲಮೂಲಗಳಲ್ಲಿ ವಿಸರ್ಜನೆ ಮಾಡಲಾಗಿದೆ.