ಗಣೇಶ ಚತುರ್ಥಿ : ಕಾಂಗ್ರೆಸ್ ನಾಯಕರಿಂದ ಶುಭಾಶಯ
ಬೆಂಗಳೂರು : ಇಂದು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ನಾಡಿನ ಜನತೆಗೆ ಶುಭಶಯಗಳನ್ನು ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷನಾಯಕ ಸಿದ್ದರಾಮಯ್ಯ, ಗೌರಿ ಹಬ್ಬವು ಸಮಸ್ತ ಜನರ ಬಾಳಲ್ಲಿ ಸುಖ, ಶಾಂತಿ, ಸಂತಸವನ್ನು ತರಲಿ. ನಾಡಿನ ಜನರ ಕಷ್ಟದ ದಿನಗಳು ದೂರಾಗಿ ಸಮೃದ್ಧಿಯು ಶಾಶ್ವತವಾಗಿ ನೆಲೆಸಲಿ ಎಂದು ಈ ಶುಭ ದಿನದಂದು ಹಾರೈಸುತ್ತೇನೆ. ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಇನ್ನು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ, ಗಣೇಶನೆಂದರೆ ವಿಘ್ನ ನಿವಾರಕ, ಸಂಕಟ ಹರಣ. ಕೋವಿಡ್ 19 ನಂತಹ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವಿನಾಯಕನ ಪ್ರಾರ್ಥನೆ ಅನಿವಾರ್ಯ ಹಾಗೂ ಅರ್ಥಪೂರ್ಣವೂ ಹೌದು. ಈ ಗಣೇಶ ಚತುರ್ಥಿಯು ನಿಮ್ಮ ಬದುಕಿನಲ್ಲಿ ಯಶಸ್ಸು ಮತ್ತು ಶುಭವನ್ನು ತರಲಿ. ಪ್ರೀತಿಪಾತ್ರರೊಂದಿಗೆ ಹಬ್ಬ ಆಚರಿಸುವಾಗ ಕೋವಿಡ್ ಮಾರ್ಗಸೂಚಿಗಳು ಗಮನದಲ್ಲಿರಲಿ ಎಂದು ಶುಭಾಶಯ ಕೋರಿದ್ದಾರೆ.