Ganeshotsava | ಗಣೇಶ ಹಬ್ಬದ ಭಜನೆ ವೇಳೆ ಕಲಾವಿದ ಸಾವು
ಉತ್ತರ ಪ್ರದೇಶ : ಗಣೇಶೋತ್ಸವದ ಆಚರಣೆಯ ವೇಳೆ ಭಜನೆ ಮಾಡುತ್ತಲೇ ಕಲಾವಿದರೊಬ್ಬರು ಮೃತಪಟ್ಟಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೈನ್ ಪುರಿಯಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ರವಿ ಶರ್ಮಾ ಎಂಬುವವರು ಹನುಮಂತನ ವೇಷಭೂಷಣ ಧರಿಸಿ ನೃತ್ಯ ಪ್ರದರ್ಶನ ನೀಡುತ್ತಿದ್ದರು.
ಹೀಗೆ ನೃತ್ಯ ಮಾಡುತ್ತಾ, ರವಿ ಶರ್ಮಾ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಆದ್ರೂ ಅವರು ಮರಣ ಹೊಂದಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ganeshotsava-UP artist playing role of Hanuman dies while performing at Ganesh pandal saaksha tv