ಉತ್ತರಪ್ರದೇಶ : ಆಂಬ್ಯುಲೆನ್ಸ್ ನಲ್ಲಿ 14 ವರ್ಷದ ಬಾಲಕಿಯ ಶವ ಪತ್ತೆ – ಕೊಲೆಗೂ ಮುನ್ನ ಸಾಮೂಹಿಕ ಅತ್ಯಾಚಾರ..!
ಉತ್ತರಪ್ರದೇಶ : ಅಪರಾಧಗಳ ಆಗರ ಉತ್ತರ ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದ ಆಸ್ಪತ್ರೆಯ ಹೊರಗೆ ಆಂಬುಲೆನ್ಸ್ ಒಂದರಲ್ಲಿ 14 ವರ್ಷದ ಬಾಲಕಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ. ಸ್ಥಳೀಯ ಜನರ ಮಾಹಿತಿ ಪ್ರಕಾರ ಇಬ್ಬರು ಅಪರಿಚಿತರು ಆಕೆಯನ್ನು ಆಂಬ್ಯುಲೆನ್ಸ್ ನಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ಕರೆತಂದು ಬಿಟ್ಟು ಹೋದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಗೆ ರವಾನಿಸಲಾಗಿದೆ.
ಮಾರ್ಚ್ 31 ರಂದು ಇಬ್ಬರು ಆಕೆಯನ್ನು ಹಾಪೂರ್ ಜಿಲ್ಲೆಯಿಂದ ಅಪರಿಚಿತರು ಅಪಹರಿಸಿದ್ದಾರೆ ಎಂದು ಪೋಷಕರು ಸ್ಥಳೀಯ ಠಾಣೆಗೆ ದೂರು ನೀಡಿದ್ದು, ತನಿಖೆ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ಧಾರೆ.
ಹುಕ್ಕೇರಿ : ಬಸ್ಸಿನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ
ಥಿಯೇಟರ್ ಗಳಲ್ಲಿ ಶೇ. 50 % ಸೀಟಿಂಗ್ – ಸರ್ಕಾರದ ವಿರುದ್ಧ ತಿರುಗಿಬಿದ್ದ ‘ರಾಖಿ ಭಾಯ್’..!