60 ರ ವೃದ್ಧೆ ಮೇಲೆ ಎರಗಿಬಿದ್ದ ಕಾಮಪಿಶಾಚಿಗಳು – ಸಾಮೂಹಿಕ ಅತ್ಯಾಚಾರ
ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಮಹಿಳೆಯರು ಭಯದಲ್ಲಿ ಬದುಕುವಂತಾಗಿದೆ.. ದಿನಬೆಳಗಾದ್ರೆ , ಮಕ್ಕಳು ಅಪ್ರಾಪ್ತರು , ಮಹಿಳೆಯರು , ವಿವಾಹಿತರು , ವೃದ್ಧೆಯರ ಮೇಲೂ ಕಾಮ ಪಿಸಾಚಿಗಳು ಅಟ್ಟಹಾಸ ಮೆರೆಯುತ್ತಾ ಇದ್ದಾರೆ.. ಆದ್ರೂ ಇಂತಹ ಪ್ರಕರಣಗಳು ಮಾತ್ರ ಕಡಿಮೆಯಾಗದೇ ದಿನೇ ದಿನೇ ಹೆಚ್ಚಾಗ್ತಲೇ ಇರೋದು ಅಲ್ಲಿನ ಕಾನೂನು ವ್ಯವಸ್ಥೆ ಯಾವ ರೀತಿ ಇರಬಹುದು ಎಂಬುದನ್ನ ತೋರಿಸುತ್ತೆ…
ಯೋಗಿ ರಾಜ್ಯದಲ್ಲಿ ಇದೀಗ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ.. 60 ವರ್ಷದ ವೃದ್ಧೆ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗಗಳಿಗೆ ಒಣಮೆಣಸಿನಕಾಯಿ ಹಾಕಿ ಆಕೆಯನ್ನು ಪೊದೆಗಳ ಒಳಗೆ ಬಿಟ್ಟು ಹೋಗಿ ರಾಕ್ಷಸತ್ವ ಮೆರೆದಿದ್ದಾರೆ.. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಬ್ರಾಯ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ನಿದ್ರೆಯಲ್ಲಿದ್ದ ವೃದ್ಧ ಮಹಿಳೆಯನ್ನು ಹಂತಕರು ಎಳೆದೊಯ್ದು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಮೃಗಗಳಂತೆ ವರ್ತಿಸಿದ್ದಾರೆ. ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಅಪರಾಧದ ಬಗ್ಗೆ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಮಹಿಳೆಗೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ..
“ಇನ್ಮೆಲೆ ಶೂಟೌಟ್ ಮಾಡಿದ ಬಳಿಕ ಎಕ್ಸ್ ರೇ ಬೇಕೇ ಬೇಕು”
ಇನ್ನೂ ಮರುದಿನ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧೆಯನ್ನ ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರಿಗೆ ಹೇಳಿಕೆ ಕೊಟ್ಟ ಸಂತ್ರಸ್ತೆ, ತನ್ನ ಪಕ್ಕದ ಮನೆಯ ಇಬ್ಬರು ಪುರುಷರು ಅಪರಾಧಗೈದಿದ್ದಾರೆ ಎಂದು ಹೇಳಿದ್ದು, ತನ್ನ ಮನೆ ಹಾಗೂ ಜಮೀನನ್ನು ಬಿಟ್ಟು ಹೋಗಲು ತನ್ನ ಮೇಲೆ ಒತ್ತಡ ಹೇರಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಿಬ್ಬರನ್ನ ಬಂಧಿಸಿರುವ ಪೊಲೀಸರು ಮಿಕ್ಕವರ ಸೆರೆಗೆ ಬಲೆ ಬೀಸಿದ್ದಾರೆ.








