ಉತ್ತರಪ್ರದೇಶ : ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಉತ್ತರಪ್ರದೇಶ : ಪ್ರಸ್ತುತ ಮಹಿಳೆಯರಿಗೆ ಎಲ್ಲೂ ಕೂಡ ಸುರಕ್ಷತೆ ಇಲ್ಲದೆ ಇರುವಂತಹ ವಾತಾವರಣ ನಿರ್ಮಾಣವಾಗ್ತಿದೆ ಎಂದು ಹೇಳುವುದಕ್ಕೆ ದಿನೇ ದಿನೇ ಹೆಚ್ಚಾಗುತ್ತಿರುವ ಕಿರುಕುಳ ಪ್ರಕರಣಗಳು ಸಾಕ್ಷಿ.. ಅದ್ರಲ್ಲೂ ಉತ್ತರಪ್ರದೇಶ ಅಂತೂ ಅಪರಾಧಗಳ ಆಗರವಾಗಿ ಮಾರ್ಪಾಡಾಗಿಬಿಟ್ಟಿದೆ. ಇದೀಗ ಯುಪಿಯಲ್ಲಿ ಬೆಳಕಿಗೆ ಬಂದಿರುವ ಮತ್ತೊಂದು ಘಟನೆ ಅಲ್ಲಿನ ಕಾನೂನಿನ ಅಭದ್ರತೆಗೆ ಸಾಕ್ಷಿಯಾಗಿದೆ. 55 ವರ್ಷದ ಮಹಿಳೆಯನ್ನು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 4 ಜನ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಮಹಿಳೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ಆರೋಪಿಯೊಬ್ಬನ ಗುರುತನ್ನು ಪತ್ತೆ ಹಚ್ಚಿದ್ದು, ಆತ ತಮ್ಮ ಗ್ರಾಮದವನೇ ಆಗಿದ್ದಾನೆ ಮತ್ತು ಅದೇ ಜಮೀನಿನಲ್ಲಿ ಜಾನುವಾರುಗಳಿಗೆ ಹುಲ್ಲು ಮೇಯಿಸುತ್ತಿದ್ದ ಎಂದು ತಿಳಿಸಿದ್ದಾರೆ. ಇದೀಗ ಉಳಿದ ಮೂವರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, ಆಕೆಯನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಆರೋಪಿ ಮತ್ತು ಆತನ ಸಹಚರರು ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಮಹಿಳೆ ಕೂಡಲೇ ತನ್ನ ಮನೆಗೆ ಆಗಮಿಸಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
ಬೆಳಗಾವಿ | ಕಾಲುವೆಗೆ ಬಿದ್ದು ಮಗು ಸಾವು