ಉತ್ತರಪ್ರದೇಶ : 10ನೇ ತರಗತಿಯ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಅಪರಾಧಗಳ ಆಗರವಾಗ್ತಿರುವ , ಅದ್ರಲ್ಲೂ ಮಹಿಳೆಯರಿಗೆ ಸುರಕ್ಷಿತವಲ್ಲದೇ ಇರುವ ನಂಬರ್ ಒನ್ ರಾಜ್ಯವಾಗಿ ಮಾರ್ಪಾಡಾಗಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಹೇಗ ಕೃತ್ಯ ಬೆಳಕಿಗೆ ಬಂದಿದೆ… 10 ನೇ ತರಗತಿ ವಿದ್ಯಾರ್ಥಿನಿಗೆ ಮಾದಕ ವಸ್ತು ನೀಡಿ , ಆಕೆಯ ಮೇಲೆ ನಾಲ್ವರು ಮೃಗಗಳು ಅತ್ಯಾಚಾರವೆಸಗಿದ್ದಾರೆ..
ಅಪ್ರಾಪ್ತೆಯು ಟ್ಯೂಷನ್ ಗೆ ಹೋಗಿದ್ದಾಗ ಇಬ್ಬರು ಆಕೆಯ ಮುಂದೆ ಬಂದು ಮಾದಕ ದ್ರವ್ಯ ನೀಡಿದ್ದಾರೆ. ನಂತರ ಅವಳನ್ನು ಇಬ್ಬರು ವ್ಯಕ್ತಿಗಳು ಸದ್ಪುರ ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿದ್ದ ಮತ್ತಿಬ್ಬರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಇತ್ತ ಸಂಜೆ ಕಳೆದರೂ ಬಾಲಕಿಯು ಮನೆಗೆ ಬಾರದಿರುವುದರಿಂದ ಗಾಬರಿಗೊಂಡಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ ನಂತರ ಬಾಲಕಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ ನಂತರ ಅವರಿಗೆ ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಬಾಲಕಿಗೆ ಚಿಕಿತ್ಸೆ ನೀಡಿ ವಿಚಾರಿಸಿದಾಗ ಸಂತ್ರಸ್ತೆಯು ಕುಟುಂಬಸ್ಥರಿಗೆ ಎಲ್ಲಾ ವಿಚಾರ ತಿಳಿಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸ್ಥಳೀಯ ಜನಸತ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ…