ತಿರುವನಂತಪುರ : ಆಶ್ರಮದಲ್ಲಿದ್ದ ವಿದೇಶಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘಟನೆಯೊಂದು ವರದಿಯಾಗಿದೆ.
ಅಮೆರಿಕಾದಿಂದ (America) ಬಂದು ಕೇರಳದ (Kerala) ಆಶ್ರಮವೊಂದರಲ್ಲಿ (Ashram) ತಂಗಿದ್ದ ಮಹಿಳೆಯ ಮೇಲೆ ಪಾಪಿಗಳು, ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 31ರಂದು ಈ ಘಟನೆ ನಡೆದಿದ್ದು, 44 ವರ್ಷದ ಯುಎಸ್ ಮಹಿಳೆ ಕಡಲ ತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ವೇಳೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸಿಗರೇಟ್ ಹಂಚಿಕೊಳ್ಳುವ ನೆಪದಲ್ಲಿ ಮಹಿಳೆಯ ಹತ್ತಿರ ಬಂದಿದ್ದು, ಮಹಿಳೆ ಅದನ್ನು ನಿರಾಕರಿಸಿದಾಗ ಮದ್ಯ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯ ಸೇವಿಸಿದ ನಂತರ ಮಹಿಳೆಗೆ ನಶೆ ಏರಿದೆ. ಈ ಸಂದರ್ಭದಲ್ಲಿ ಆರೋಪಿಗಳು ಮಹಿಳೆಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಸಮೀಪದ ಖಾಲಿ ಮನೆಯಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.








