ಯುವತಿಯ ಮೇಲೆ 2 ದಿನಗಳ ಕಾಲ ನಿರಂತರ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಬಿಜೆಪಿ ಮುಖಂಡನೂ ಭಾಗಿ..!
ಮಧ್ಯಪ್ರದೇಶ: 20 ವರ್ಷದ ಯುವತಿಯೊಬ್ಬಳು ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನ ಕಾರಿನಲ್ಲಿ ಅಪಹರಿಸಿ, ಫಾರ್ಮ್ ಹೌಸ್ ಗೆ ಎಳೆದೊಯ್ದ ಮೂವರು ಕಾಮುಕರು 2 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರು ಸೇರಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಯುವತಿ ಒಬ್ಬಳೇ ಮನೆಗೆ ತೆರಳುತ್ತಿರುವುದನ್ನು ಗಮನಿಸಿದ ಮೂವರು ಕಾಮುಕರು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಕ್ಕದ ಹಳ್ಳಿಗೆ ಕರೆದೊಯ್ದಿದ್ದಾರೆ. ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ನಿರಂತರ 2 ದಿನಗಳವರೆಗೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರಕ್ಕೂ ಮುನ್ನ ಅಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿದೆ. ಬಳಿಕ ಯುವತಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ತಂದೆಯ ಮೂಡನಂಬಿಕೆಯಿಂದಾಗಿ ಜೀವ ಕಳೆದುಕೊಂಡ ಮಗಳು..!
ಮತ್ತೊಂದೆಡೆ ಯುವತಿ ಕಾಣದೇ ಇರುವುದರಿಂದ ಗಾಬರಿಗೊಂಡ ಪಾಲಕರು ಜೈತ್ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತ ಯುವತಿ 2 ದಿನಗಳ ನಂತರ ಮನೆಗೆ ಬಂದು ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಯುವತಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.