ಅಪ್ರಾಪ್ತ ವಿವಾಹಿತೆ ಮೇಲೆ 6 ತಿಂಗಳಲ್ಲಿ 400 ಜನರಿಂದ ಅತ್ಯಾಚಾರ
ಮುಂಬೈ: ಮನಕುಲವೇ ತಲೆತಗ್ಗಿಸುವಂತ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.. ಹೌದು ವಿವಾಹಿತ ಅಪ್ರಾಪ್ತೆ ಮೇಲೆ 6ತಿಂಗಳುಗಳಿಂದ ಪೊಲೀಸರು ಸೇರಿದಂತೆ ಸುಮಾರು 400 ಮಂದಿ ಸಾಮೂಹಿಕ ಅತ್ಯಾಚಾರವೆಸಗಿ ರಾಕ್ಷಸರ ರೀತಿ ವರ್ತನೆ ತೋರಿದ್ದಾರೆ.. ಮಹಾರಾಷ್ಟ್ರದ ಬೀಡ್ ನ ಯುವತಿ ಜೊತೆಗೆ ಈ ರೀತಿಯಾಗಿ ರಾಕ್ಷಸರಂತೆ ನಡೆದುಕೊಳ್ಳಲಾಗಿದೆ… ದ
ಸಂತ್ರಸ್ತ ಅಪ್ರಾಪ್ತ ಬಾಲಕಿಯು ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಇತ್ತ ತಂದೆ ಮಗಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕೆಂದು, ವರನನ್ನು ಹುಡುಕಿ ಮದುವೆ ಮಾಡಿದ್ದರು. ಗಂಡನ ಮನೆ ಸೇರಿದಾಗ, ಆಕೆಯ ಗಂಡ 6 ತಿಂಗಳು ಕೆಲಸ ಟ್ರೈನಿಂಗ್ ಹಿನ್ನೆಲೆ ಬೇರೆ ಊರಿಗೆ ತೆರಳಿದ್ದ. ಆಗ ಮಾವ ಸೊಸೆ ಮೇಲೆ ಮಾವ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ.
ಸಿಡಿಮದ್ದು ಸ್ಫೋಟಗೊಂಡು ಛಿದ್ರ ಛಿದ್ರವಾದ ಸಾಕುನಾಯಿ
ಪತಿ ಮನೆಯ ಕಿರಕುಳದಿಂದ ಬೇಸತ್ತ ಆಕೆ ಕೆಲಸ ಹುಡುಕಿ ಹೋದಾಗ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಇಬ್ಬರು ದುರುಳರು ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಆಕೆ ಯಾವುದೋ ಜಾಲದಲ್ಲಿ ಸಿಲುಕಿ 400 ಮಂದಿ ಆಕೆ ಮೇಲೆ ಅತ್ಯಾಚಾರವೆಸಿಗಿದ್ದಾರೆ. ಪೊಲೀಸರು ಕೂಡ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈಗ ಆಕೆ ಗರ್ಭಿಣಿಯಾಗಿದ್ದಾಳೆ. ಸಂತ್ರಸ್ತೆಯನ್ನ ರಕ್ಷಿಸಿರುವ ಮಕ್ಕಳ ಇಲಾಖೆ ಸಮಿತಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಕುರಿತಾಗಿ ತನಿಖೆಯನ್ನ ಮುಂದುವರೆಸಲಾಗಿದೆ..