ಸಿಡಿಮದ್ದು ಸ್ಫೋಟಗೊಂಡು ಛಿದ್ರ ಛಿದ್ರವಾದ ಸಾಕುನಾಯಿ
ಮೈಸೂರು : ಕಾಡು ಪ್ರಾಣಿಗಳ ಬೇಟೆಗೆ ಇರಿಸಲಾಗಿದ್ದ ಡಿಸಿಮದ್ದು ಸ್ಪೋಟಗೊಂಡಿದ್ದು, ಸಾಕು ನಾಯಿ ಛಿದ್ರ ಛಿದ್ರವಾಗಿರುವ ಘಟನೆಯು ಮೈಸೂರಿನಲ್ಲಿ ನಡೆದಿದೆ..
ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ, ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಇರಿಸಿದ್ದ ಸಿಡಿಮದ್ದು ಸ್ಫೋಟವಾಗಿ ನಾಯಿ ದಾರುಣವಾಗಿದೆ ಸಾವನಪ್ಪಿದೆ..
ಕಪ್ಪಸೋಗೆ ಗ್ರಾಮದ ಮಹೇಶ್ ಎಂಬವರಿಗೆ ಸೇರಿದ್ದ ಸಾಕುನಾಯಿ ಮೃತಪಟ್ಟಿದೆ.. ಸ್ಫೋಟದ ಶಬ್ದಕ್ಕೆ ಜಾನುವಾರುಗಳು ಚೆಲ್ಲಾಪಿಲ್ಲಿಯಾಗಿ ಓಡಿವೆ. ಆತಂಕದಲ್ಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಛಿದ್ರವಾದ ನಾಯಿಯ ಮೃತ ದೇಹ ಕಂಡುಬಂದಿದೆ.








