ಪೇಜಾವರ ಶ್ರೀಗಳು ಕೋಳಿ ತಿಂತಾರ ?  – ಕ್ಷಮೆ ಕೇಳಿದ ನಾದಬ್ರಹ್ಮ

1 min read

ಪೇಜಾವರ ಶ್ರೀಗಳು ಕೋಳಿ ತಿಂತಾರ ?  – ಕ್ಷಮೆ ಕೇಳಿದ ನಾದಬ್ರಹ್ಮ

ಸಾರ್ವಜನಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ, ಪೇಜಾವರ ಶ್ರೀಗಳ ಕುರಿತು ಆಡಿದ ಮಾತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ದಲಿತನ ಮನೆಗೆ ಬಲಿತ ಹೋಗುವುದು ದೊಡ್ಡದಲ್ಲ  ದಲಿತನನ್ನ ಬಲಿತ ತನ್ನ ಮನೆಗೆ ಕರೆದುಕೊಂಡು ಹೋಗಬೇಕು . ಪೇಜಾವರ ಶ್ರೀಗಳು  ದಲಿತರ ಮನೆಗೆ ಹೋಗ್ತಾರೆ ಅವರೆನು ಅಲ್ಲಿ ಕೋಳಿ ತಿಂತಾರಾ. ಕುರಿಯ ರಕ್ತ ಕುಡಿತಾರ. ಲಿವರ್ ತಿಂತಾರ ಎಂದು ಪ್ರಶ್ನಿಸಿರುವುದು.  ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಟೀಕೆಗೆ ಒಳಗಾದ ನಂತರ ಎಚ್ಚೆತ್ತಿರುವ ಹಂಸಲೇಖ ಫೇಸ್ ಬುಕ್ ನಲ್ಲಿ ವೀಡಿಯೋ ಬಿಡುಗಡೆ ಮಾಡಿ ಕ್ಷಮೆ ಕೇಳಿದ್ದಾರೆ.

“ನಾನು ಮೊದಲನೆಯದಾಗಿ ಕ್ಷಮೆ ಕೇಳ್ತೇನೆ ಎರಡನೆಯದಾಗಿನೂ ಕೇಳ್ತೇನೆ, ನಾನು ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದಿತ್ತು. ಅಸ್ಪೃಶ್ಯತೆಯನ್ನ ಹೊಡೆದೋಡಿಸಲು  ಪೇಜಾವರ ಶ್ರೀಗಳು  ಶ್ರಮ ವಹಿಸುತ್ತಿದ್ದಾರೆ.  ನಾನು ಆಡಿದ ಮಾತುಗಳು  ನನ್ನ ಪತ್ನಿ ಗೆ ಹಿಡಿಸಲಿಲ್ಲ ನನ್ನ ಪತ್ನಿಯ ಬಳಿಯೂ ನಾನು ಕ್ಷಮೆಕೇಳಿದ್ದೇನೆ. ನಾನು ಸಂಗೀತಗಾರ ಕಂಟ್ರೋಲ್ ನಲ್ಲಿ ಇರಬೇಕಿತ್ತು. ಯಾರಿಗೂ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ  ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಮಠದ ಈಗಿನ ಕಿರಿಯ ಶ್ರೀಗಳು “ಹಂಸಲೇಖ ಅವರನ್ನ ಸಮಾಜ ತುಂಬಾ ಎತ್ತರದಲ್ಲಿಟ್ಟಿದೆ. ಅವರ ಬಾಯಲ್ಲಿ ಇಂತ ಮಾತುಗಳು ಬರಬಾರರದಿತ್ತು. ಪ್ರಚಾರಕ್ಕಾಗಿ ಸಾಕಷ್ಟು ಜನ ಹೀಗೆ ಟೀಕೆ ಮಾಡುತ್ತಾರೆ. ಆದರೆ ಅವರಿಗೆ ಪ್ರಚಾರ ಬೇಕಿರಲಿಲ್ಲ.ನನ್ನ ಗುರುಗಳು ಎಲ್ಲರ ಹೃದಯದಲ್ಲೂ ಕೃಷ್ಣನನ್ನ ಕಂಡವರು ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು ನೆರೆ ಹಾವಳಿ ಭೂಕಂಪ ಆದಾಗಲು ಹೋಗುತ್ತಿದ್ದರು. ಯಾರದೋ ಹೊಗಳಿಕೆ ತೆಗಳಿಕೆಗೆ ನಾವು  ಈ ಕೆಲಸ ಮಾಡುತ್ತಿಲ್ಲ ಎಂದು ವಿಶ್ವ ಪ್ರಸನ್ನ ತೀರ್ಥ ಶ್ರಿಗಳು ಹೇಳಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd