ಕೋಚಿಂಗ್ ಸೆಂಟರ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಪಾಟ್ನಾ: ದೂರು ನೀಡಿದ್ದಕ್ಕೆ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದ ಜಮುಯಿ ಜಿಲ್ಲೆಯ ಕೋಚಿಂಗ್ ಸೆಂಟರ್‌ನಲ್ಲಿ ನಡೆದಿದೆ.
ನಡೆದಿದ್ದೇನು ?: ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಯೊಬ್ಬ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಕುರಿತು ಕೋಚಿಂಗ್ ಸೆಂಟರ್‌ನ ಮುಖ್ಯಸ್ಥರಿಗೆ ಬಾಲಕಿಯ ಕುಟುಂಬದವರು ದೂರು ನೀಡಿದ್ದರು. ಮುಖ್ಯಸ್ಥರು ಇನ್ನು ಮುಂದೆ ಬಾಲಕಿಗೆ ಈ ರೀತಿ ತೊಂದರೆಯಾಗುವುದಿಲ್ಲ ಅಂತಾ ಭರವಸೆ ನೀಡಿದ್ದರು.
ನಂತರ ಕುಟುಂಬವು ಅದೇ ಕೋಚಿಂಗ್ ಸೆಂಟರ್‌ಗೆ ಬಾಲಕಿಯನ್ನು ಕಳುಹಿಸಲು ನಿರ್ಧರಿಸಿದರು. ಬಾಲಕಿ ಮತ್ತೆ ಅದೇ ಕೋಚಿಂಗ್ ಸೆಂಟ್ ರ ಗೆ ಬರುತ್ತಿದ್ದಳು. ಬಾಲಕಿಯ ಕುಟುಂಬಸ್ಥರು ಕೋಚಿಂಗ್ ಸೆಂಟರ್‌ನ ಮುಖ್ಯಸ್ಥರಿಗೆ ದೂರು ನೀಡಿದ್ದಕ್ಕೆ ಆರೋಪಿ ಮತ್ತು ಅವನ ಸ್ನೇಹಿತರು ಕೋಪಗೊಂಡಿದ್ದರು.
ಒಂದು ದಿನ ಬಾಲಕಿಯು ಕೋಚಿಂಗ್ ಕ್ಲಾಸ್‍ನಿಂದ ಹಿಂತಿರುಗುತ್ತಿದ್ದಾಗ, ಬಾಲಕಿಯನ್ನು ಬಲವಂತವಾಗಿ ಸಮೀಪದ ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಮೂವರನ್ನು ಬಂಧಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿಯ ನಂತರ ಸಾಮೂಹಿಕ ಅತ್ಯಾಚಾರ ನಡೆದಿರುವುದು ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.








