ಮಹಿಳೆ ಮೇಲೆ ಆಟೋ ಚಾಲಕ ಸೇರಿ ಮೂವರಿಂದ ಸಾಮೂಹಿಕ ಅತ್ಯಾಚಾರ
ನವದೆಹಲಿ : ಮಹಿಳೆಯ ಮೇಲೆ ಆಟೋ ಚಾಲಕ ಸೇರಿದಂತೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಐಟಿಒ ಪ್ರದೇಶದಲ್ಲಿ ನಡೆದಿದೆ. 27 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಇವರು ಈಶಾನ್ಯ ದೆಹಲಿಯ ಖಜೂರಿ ಖಾಸ್ ಪ್ರದೇಶದಿಂದ ಕಾಶ್ಮೀರ ಗೇಟ್‍ಗೆ ಆಟೋ ಹತ್ತಿದ್ದರು. ಆದ್ರೆ ಆಕೆಯನ್ನ ಬಲವಂತವಾಗಿ ರೂಮ್ ಗೆ ಕರೆದೊಯ್ಯಲಾಗಿದ್ದು, ಚಾಲಕ ಸೇರಿದಂತೆ ಮೂವರು ಆಕೆಯ ಮೇಲೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಬುಲ್ ಮಸೀದಿ ಬಳಿ ಬಾಂಬ್ ಸ್ಪೋಟ – ಇಬ್ಬರು ಸಾವು
ಮಹಿಳೆ ಉತ್ತರ ಪ್ರದೇಶದ ಸಂಭಾಲ್ ಮೂಲದವರಾಗಿದ್ದು, ಕೆಲವು ಕೆಲಸಗಳ ಕಾರಣದಿಂದ ದೆಹಲಿಗೆ ಬಂದಿದ್ದರು ಎನ್ನಲಾಗಿದೆ. ಆದರೆ ಆರೋಪಿಗಳು ಮಹಿಳೆಯನ್ನು ಐಟಿಒ-ಯಮುನಾ ಸೇತುವೆ ಬಳಿ ರೂಮ್‍ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಕಾಶ್ಮೀರ ಗೇಟ್ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಆಟೋ ಚಾಲಕ ತನ್ನ ಒಬ್ಬ ಸ್ನೇಹಿತನನ್ನ ಮಾತ್ರ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ. ಆದರೆ ಮಹಿಳೆ ಇನ್ನೂ ಇಬ್ಬರು ವ್ಯಕ್ತಿಗಳಿದ್ದರು ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆ ನೀಡಿರುವ ದೂರಿನ ಅನ್ವಯ ಐಪಿ ಎಸ್ಟೇಟ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








