ಉತ್ತರಪ್ರದೇಶ : ಡ್ರಾಪ್ ಕೊಡುವ ನೆಪದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಗೆಳೆಯನಿಂದ ಮಹಿಳೆಯ ಮೇಲೆ ಗ್ಯಾಂಗ್ ರೇಪ್
ಉತ್ತರಪ್ರದೇಶ : ಪೊಲೀಸ್ ಕಾನ್ಟೇಬಲ್ ಹಾಗೂ ಆತನ ಸ್ನೇಹಿತ ಸೇರಿ ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಕಾಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಕಾನ್ಸ್ ಟೇಬಲ್ ನನ್ನ ಧರ್ಮೇಂದ್ರ ಕುಮಾರ್ ಹಾಗೂ ಆತನ ಗೆಳೆಯನನ್ನ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ಕಾಗಂಜ್ ನಲ್ಲಿ ನೇಮಕೊಗೊಂಡಿದ್ದ ಕಾನ್ಸ್ ಟೇಬಲ್ ಸುಮಾರು 3 ತಿಂಗಳುಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಆದ್ರೆ ಯಾಕೆ ಏನು ಕಾರಣ ಎಂದುದನ್ನ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. 23 ವರ್ಷದ ಮಹಿಳೆಯು ಶಿಕೋಹಾಬಾದ್ ನ ಆಸ್ಪತ್ರೆಗೆ ತೆರಳಿ ಬಸ್ ಮೂಲಕ ಗ್ರಾಮಕ್ಕೆ ವಾಪಸ್ ಆಗಿದ್ದರು.
ಗ್ರಾಮದಲ್ಲಿ ಬಸ್ ನಿಮದ ಇಳಿದ ಬಳಿಕ ಟಾಕ್ಸಿಗಾಗಿ ಕಾಯುತ್ತಿದ್ದಾಗ ಆರೋಪಿಗಳು ಆಕೆಗೆ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಅವರ ಮಾತನ್ನ ನಂಬಿ ಹೋದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.