ದೆಹಲಿ: ಸಿಕ್ಸ್ ಗಳನ್ನು ಸಿಡಿಸುತ್ತಲೇ ಕ್ರಿಕೆಟ್ ಅಭಿಮಾನಿಗಳ ಹೃದಯದ ಸಿಂಹಾಸನವೇರಿದ್ದ ಯುವರಾಜ್ ಸಿಂಗ್ ತಮ್ಮ ಸೂಪರ್ ಕ್ಯಾಪ್ಟನ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಡಗೈ ಮಾಂತ್ರಿಕನ ಮನಸ್ಸಿನಲ್ಲಿ ಕ್ಯಾಪ್ಟನ್ ಧೋನಿಗಾಗಲಿ, ಕ್ಯಾಪ್ಟನ್ ಕೊಹ್ಲಿಗಾಗಲಿ ಜಾಗವಿಲ್ಲ. ಈತನ ಎದೆಯಾಳದ ಹೀರೋ ಒಬ್ಬನ್ನೇ ಆತನ ಹೆಸರು ಸೌರವ್ ಗಂಗೂಲಿ.
ಹೌದು, ದಾದಾನೇ ನನಗೆಲ್ಲಾ ನನ್ನ ವೃತ್ತಿ ಜೀವನದ ನೆನಪುಗಳಲ್ಲಿ ಅತಿಹೆಚ್ಚು ನೆನಪಿಗೆ ಬರುವುದು ಗಂಗೂಲಿಯ ಜೊತೆಗಿದ್ದ ದಿನಗಳು. ಯಾಕೆಂದರೆ ಅವರು ನನ್ನನ್ನು ಪ್ರೀತಿಸಿದ್ದರು. ಅವರು ನನ್ನನ್ನು ಬೆಂಬಲಿಸಿದ್ದರು. ಅವರು ನನ್ನನ್ನು ಸಮರ್ಥಿಸಿಕೊಂಡಿದ್ದರು. ಅವರು ನನ್ನ ಬೆನ್ನಿಗೆ ನಿಂತಿದ್ದರು. ಆದರೆ ಮಹೇಂದ್ರ ಸಿಂಗ್ ಧೋನಿಯಿಂದಾಗಲಿ, ವಿರಾಟ್ ಕೊಹ್ಲಿಯಿಂದಾಗಲಿ ನನಗೆ ಗಂಗೂಲಿಯಿಂದ ಸಿಕ್ಕಷ್ಟು ಬೆಂಬಲ ಸಿಗಲೇ ಇಲ್ಲ ಎಂದು ಯುವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.








