ಬೆಂಗಳೂರು : ಮಾದಕ ವಸ್ತುಗಳು ಸದ್ಯ ಚಾಕ್ಲೆಟ್ ರೂಪದಲ್ಲಿ ಮಾರುಕಟ್ಟೆಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲಾಗುತ್ತದೆ. ಸದ್ಯ ಬೆಂಗಳೂರಿಗೂ (Bengaluru) ಗಾಂಜಾ ಚಾಕ್ಲೆಟ್ (Cannabis chocolate) ಕಾಲಿಟ್ಟಿದ್ದು, ಉತ್ತರಪ್ರದೇಶದಿಂದ (Uttar Pradesh) ಬೆಂಗಳೂರಿಗೆ ತಂದು ಮಾರಾಟ ಮಾಡಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಮನೋಕಾ ಹೆಸರಿನ ಗಾಂಜಾ ಚಾಕ್ಲೆಟ್ ಪತ್ತೆಯಾಗಿದ್ದು, ಮೂವರು ಅಂಗಡಿ ಮಾಲೀಕರಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಮ್ ಅಖ್ತಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, 6 ಲಕ್ಷ ರೂ. ಮೌಲ್ಯದ ಗಾಂಜಾ ಚಾಕ್ಲೆಟ್ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಈ ಹಿಂದೆ ಕೂಡ ಗಾಂಜಾ ಚಾಕ್ಲೆಟ್ ಅನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿದ್ದ. ಆರ್‌ಎಂಸಿ ಯಾರ್ಡ್ (RMC Yard) ಬಳಿ ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲು ಯತ್ನಿಸಿದ್ದು, 50 ರೂ.ಗೆ ಮೂರು ಚಾಕ್ಲೆಟ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಮುನಾಕ್ಕಾ, ಮಹಾಕಾಲ, ಆನಂದ, ಚಾರ್ ಮಿನಾರ್ ಗೊಲ್ಕ್ ಹೆಸರಿನ ಚಾಕ್ಲೇಟ್ ಮಾರಾಟ ಜಾಲ ಪತ್ತೆಯಾಗಿದ್ದು, ರೈಲಿನ ಮೂಲಕ ಉತ್ತರಪ್ರದೇಶದಿಂದ ಬೆಂಗಳೂರಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.