ಕೊರೊನಾನಿಂದ ರಕ್ಷಿಸುವ ಫ್ಯಾಬ್ರಿಕ್ ಅನ್ನು ಸಂಶೋಧಿಸಿದೆ ಗುಜರಾತ್ ನ ಗಾರ್ಮೆಂಟ್ಸ್

ಗುಜರಾತ್, ಜೂನ್ 13: ಜಗತ್ತಿನಾದ್ಯಂತ ಕೊರೊನಾ ಸೋಂಕಿನ ಭಯದಿಂದ ರಾಷ್ಟ್ರಗಳು ಕಂಗೆಟ್ಟಿರುವ ಈ ಸಮಯದಲ್ಲಿ ಗುಜರಾತ್ ಮೂಲದ ಸಂಸ್ಥೆಯೊಂದು ವಿನೂತನ ಮಾದರಿಯ ಆ್ಯಂಟಿ ವೈರಲ್ ಫ್ಯಾಬ್ರಿಕ್ ಅನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದೆ.
ಗುಜರಾತ್ ಮೂಲದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ವಿನೂತನ , ಕ್ರಿಯಾತ್ಮಕ ಹಾಗೂ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಮುಂದಿನ ಕೆಲವು ತಿಂಗಳಲ್ಲಿ ಕೊರೊನಾ ಸೋಂಕಿನಿಂದ ರಕ್ಷಿಸುವ ಬಟ್ಟೆಗಳು ಲಭ್ಯವಾಗಲಿದೆ ಎಂದು ತಿಳಿಸಿದೆ
ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವ ಬಟ್ಟೆಗಳು ಮುಂದಿನ ಕೆಲವು ತಿಂಗಳಲ್ಲಿ 8 ಸಾವಿರ ರಿಟೇಲ್ ಮಳಿಗೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ. ಗಾರ್ಮೆಂಟ್ ಸಂಸ್ಥೆ ತಿಳಿಸಿರುವ ಮಾಹಿತಿ ಪ್ರಕಾರ ಈ ಬಟ್ಟೆಯ ಮೇಲೆ ಕೊರೋನಾ ಸೇರಿದಂತೆ ಯಾವುದೇ ವೈರಾಣು ಕೂತರು ಅರ್ಧ ಗಂಟೆಯಲ್ಲಿ ನಾಶಹೊಂದಲಿದೆ. ಇದರಿಂದ ಬಟ್ಟೆಯಿಂದಾಗಿ ಕೊರೊನಾ ಸೋಂಕು ಹಬ್ಬುತ್ತದೆ ಎಂಬ ಆತಂಕವಿಲ್ಲದೇ ಇರಬಹುದು ಎಂದು ಸಂಸ್ಥೆ ತಿಳಿಸಿದೆ.

ಸ್ವಿಸ್ ಸಂಸ್ಥೆ ಹೇಕ್ ಹಾಗೂ ಥೈವಾನಿನ ರಾಸಾಯನಿಕ ಸಂಸ್ಥೆಯೊಂದಿಗೆ ಸೇರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಪ್ರಾರಂಭದಲ್ಲಿ ಶರ್ಟ್ ಮತ್ತು ಮಾಸ್ಕ್ ಗಳನ್ನು ಸಿದ್ಧಪಡಿಸಲಾಗುವುದು. ನಂತರ ಇತರ ಬಟ್ಟೆಗಳನ್ನು ಉತ್ಪಾದಿಸಲಾಗುವುದು ಎಂದು ತಿಳಿಸಿದರು.








