‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸಿನಿಮಾ ನೋಡಿದ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದರೇ ಇತ್ತ ವಿಮರ್ಶಕರು ಕೂಡ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ.
ಸಿನಿಮಾ ರಿಲೀಸ್ ಆಗಿ ಮೂರು ದಿನಗಳು ಕಳೆದರೂ ಬಹುತೇಕ ಕಡೆ ಹೌಸ್‌ಫುಲ್ ಬೋರ್ಡ್ ಬಿದ್ದಿದೆ.
ಶನಿವಾರ ಹಾಗೂ ಭಾನುವಾರ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಂದ ತುಂಬಿ ತುಳುಕಾಡಿವೆ. ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿ ಶಿವನ ರೌದ್ರಾವತಾರ.
ಹೌದು..! ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಶಿವನ ಪಾತ್ರ ಎಲ್ಲರ ಗಮನ ಸೆಳೆಯುತ್ತದೆ. ರಾಜ್ ಬಿ ಶೆಟ್ಟಿ ಅವರ ಅಭಿನಯಕ್ಕೆ ನೋಡುಗರು ಸಲಾಂ ಹೊಡೆಯಲೇಬೇಕು.
ಲಯಕಾರನಾಗಿ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಲಭೈರವನಂತೆ ನರ್ತಿಸಿದ್ದಾರೆ. ಇತ್ತ ಹರಿ ಪಾತ್ರದಲ್ಲಿ ಶಾಂತ ರೂಪದಲ್ಲಿ ರಿಷಬ್ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ.
ಇನ್ನುಳಿದಂತೆ ಸಿನಿಮಾದ ಪ್ರತಿ ಪಾತ್ರವೂ ಬಹಳ ರಿಯಲಿಸ್ಟಿಕ್ ಆಗಿ ಮೂಡಿಬಂದಿವೆ.
ಇನ್ನು ಕ್ಯಾಮೆರಾ ವರ್ಕ್, ಹಿನ್ನಲೆ ಸಂಗೀತ ಔಟ್ ಆಫ್ ದಿ ಬಾಕ್ಸ್ ಆಗಿದ್ದರೇ ಕಥೆ ಮತ್ತು ಚಿತ್ರಕಥೆ ಬೇರೆ ಲೆವೆನ್ ಎನ್ನುವಂತಿದೆ.
ಕೆಲದೋಷಗಳ ಹೊರತಾಗಿಯೂ ಒಂದೊಳ್ಳೆ ಸಂದೇಶದೊಂದಿಗೆ ಸಿನಿಮಾ ಮುಗಿಯೋದು ಕೂಡ ಸಿನಿಮಾದ ಪ್ಲಸ್ ಪಾಯಿಂಟ್.
ಹೀಗಾಗಿಯೇ ಸಿನಿಮಾ ಬಗ್ಗೆ ಜನರಲ್ಲಿ ಒಳ್ಳೆ ಅಭಿಪ್ರಾಯ ಮೂಡುತ್ತಿದೆ. ಎಲ್ಲೆಲ್ಲೂ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶಿವನ ಹವಾ ಜೋರಾಗಿದೆ.
ಇದೀಗದ ಈ ಹವಾ ಬಾಲಿವುಡ್ ಬಾಗಿಲ ಬಡಿದಿದ್ದು, ಕರಾವಳಿಯ ಶೆಟ್ಟರ ಜೋಡಿಗೆ ಬಾಲಿವುಡ್ ನಿರ್ದೇಶಕ ಬೆನ್ನು ತಟ್ಟಿದ್ದಾರೆ. ಅಲ್ಲದೇ ಸಿನಿಮಾಗೆ ನಾಲ್ಕೂವರೆ ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಹಾಡಿ ಹೊಗಲಿದ್ದಾರೆ. ಚಿತ್ರವನ್ನು ನಿರ್ದೇಶಿಸಿ ನಟಿಸಿರುವ ರಾಜ್ ಬಿ ಶೆಟ್ಟಿ ಅವರಿಗೆ ಬಾಲಿವುಡ್ ನಿರ್ದೇಶಕ ಸೂಪರ್ ಎಂದಿದ್ದಾರೆ.