Gary Ballance : ಎರಡು ದೇಶದ ಪರವಾಗಿ ಶತಕ ಬಾರಿಸಿ ದಾಖಲೆ ಬರೆದ ಗ್ಯಾರಿ ಬ್ಯಾಲೆನ್ಸ್
ಜಿಂಬಾಬ್ವೆ ತಂಡದ ಬ್ಯಾಟ್ಸ್ಮನ್ ಗ್ಯಾರಿ ಬ್ಯಾಲೆನ್ಸ್ ಅಪರೂಪದ ಸಾಧನೆ ಮೂಲಕ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನ ದಾಖಲಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ಪರವಾಗಿ ಆಡುತ್ತಿರುವ ಗ್ಯಾರಿ ಬ್ಯಾಲೆನ್ಸ್, ಭರ್ಜರಿ ಶತಕ ಬಾರಿಸಿದ್ದಾರೆ. ಆ ಮೂಲಕ ಎರಡು ದೇಶಗಳ ಪರವಾಗಿ ಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎನಿಸಿದರು. ಈ ಮೊದಲು ಕೆಪ್ಲರ್ ವೆಸೆಲ್ಸ್ ಎರಡು ದೇಶದ ಪರವಾಗಿ ಸೆಂಚುರಿ ಬಾರಿಸಿ ವಿಶ್ವದ ಗಮನ ಸೆಳೆದರು.
ಈ ಹಿಂದೆ 2014ರಿಂದ 2017ರವರೆಗೆ ಇಂಗ್ಲೆಂಡ್ ಪರವಾಗಿ ಆಡುತ್ತಿದ್ದ ಗ್ಯಾರಿ ಬ್ಯಾಲೆನ್ಸ್, ನಾಲ್ಕು ಟೆಸ್ಟ್ ಶತಕ ದಾಖಲಿಸಿದ್ದರು. ಬ್ಯಾಲೆನ್ಸ್ 2017ರ ಜುಲೈನಲ್ಲಿ ಕೊನೆಯದಾಗಿ ಇಂಗ್ಲೆಂಡ್ ಪರವಾಗಿ ಆಡಿದ್ದರು. ಪ್ರಸ್ತುತ ಜಿಂಬಾಬ್ವೆ ಪರವಾಗಿ ಆಡುತ್ತಿರುವ ಗ್ಯಾರಿ ಬ್ಯಾಲೆನ್ಸ್, ತಮ್ಮ 5ನೇ ಟೆಸ್ಟ್ ಶತಕ ದಾಖಲಿಸಿದರು. ಗ್ಯಾರಿ ಬ್ಯಾಲೆನ್ಸ್ ಜಿಂಬಾಬ್ವೆ ಕ್ರಿಕೆಟ್ ತಂಡದ ಪರವಾಗಿ ಎರಡು ವರ್ಷದ ಕಾಂಟ್ರ್ಯಾಕ್ಟ್ಗೆ ಸಹಿ ಹಾಕಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಯಾರಿ ಬ್ಯಾಲೆನ್ಸ್ 231 ಬಾಲ್ಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸ್ ಮೂಲಕ ಅಜೇಯ 137 ರನ್ಗಳಿಸಿದರು. ಇದರ ಪರಿಣಾಮ ಜಿಂಬಾಬ್ವೆ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 125 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 379 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
Gary Ballance hits senchury for countries is a record