ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟ : ನಾಲ್ವರು ಸಾವು
ಲಕ್ನೋ : ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಮತ್ತು ವಾರಣಾಸಿಯಲ್ಲಿ ನಡೆದಿದೆ.
ಎರಡು ಕಡೆ ನಡೆದಿರುವ ಘಟನೆಗಳಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಂದ್ವಾರಾ ಮಾರುಕಟ್ಟೆಯಲ್ಲಿ ತಾಜುದ್ದೀನ್ ಅನ್ಸಾರಿ ನಿಜಾಮುದ್ದೀನ್ ಅನ್ಸಾರಿ ಮತ್ತು ಶೇಖ್ ಇಸ್ಮಾಯಿಲ್ ಮೃತಪಟ್ಟವರಾಗಿದ್ದು, ವಾರಾಣಾಸಿಯ ರಾಮನಗರ ಪ್ರದೇಶದಲ್ಲಿ ಮೃತಪಟ್ಟವರನ್ನು ಗೀತಾ ದೇವಿ ಮತ್ತು ಲಲ್ಲಾ ಎಂದು ಗುರುತಿಸಲಾಗಿದೆ.
ಬಲೂನ್ ಮಾರಾಟಗಾರ ಬಲೂನ್ ಗೆ ಗ್ಯಾಸ್ ತುಂಬಿಸುವ ವೇಳೆ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.










