ಕೊರೊನಾದಿಂದ ಅಪ್ಪ ಭಾವನನ್ನ ಕಳೆದುಕೊಂಡ ಗಟ್ಟಿಮೇಳದ ನಟನ ನೋವಿನ ಮಾತು

1 min read

ಕೊರೊನಾದಿಂದ ಅಪ್ಪ ಭಾವನನ್ನ ಕಳೆದುಕೊಂಡ ಗಟ್ಟಿಮೇಳದ ನಟನ ನೋವಿನ ಮಾತು

ಕೊರೊನಾ ಮಹಾಮಾರಿಯ 2 ಅಲೆಯ ಅಬ್ಬರಕ್ಕೆ ಇಡೀ ದೇಶದ ಜನ ಅಕ್ಷರಸಃ ನುಗಿಹೋಗಿದ್ದಾರೆ. ಇತ್ತ ತಾರೆಯರು ಮಹಾಮಾರಿಗೆ ಬಲಿಯಾಗ್ತಿದ್ದರೆ. ಸೆಲೆಬ್ರಟಿಗಳು ಸಹ ತಮ್ಮವರನ್ನ ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಇದೀಗ ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿ ಗಟ್ಟಿಮೇಳದ ನಟರೊಬ್ಬರ ತಂದೆ ಮತ್ತು ಭಾವ ಮೃತಪಟ್ಟಿದ್ದು, ನಟ ಸರ್ಕಾರದ ವಿರುದ್ಧ ವಿಡಿಯೋ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

 

ಹೌದು.. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿರುವ ನಟ ಪವನ್ ಕುಮಾರ್ ಇದು ಮೊದಲು ಬಂದ ಕೋವಿಡ್ ಅಲೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಯಾರ ಮಾತನ್ನೂ ಕೇಳಬೇಡಿ.. ಹುಷಾರಾಗಿರಿ.. ಅಂತ ಜನರಲ್ಲಿ ಕೇಳಿಕೊಂಡಿದ್ದಾರೆ.

‘ನನ್ನ ಭಾವನನ್ನ ಕಳೆದುಕೊಂಡೆ, ಒಂದೇ ದಿನ ಕಣ್ಣಾರೆ 6 ಸಾವು ನೋಡಿದೆ. ದಯವಿಟ್ಟು ನಾನು ಹೇಳುತ್ತಿರುವುದನ್ನ ಅರ್ಥ ಮಾಡಿಕೊಳ್ಳಿ. ಹೋದ ವರ್ಷದ ರೀತಿ ಈ ವರ್ಷದ ಕೊರೊನಾ ಇಲ್ಲ, ತುಂಬ ಕೆಟ್ಟದಾಗಿದೆ. ವಾಸ್ತವ ಬೇರೆಯೇ ಇದೆ.

ನಾನು ಹಾಗೂ ನನ್ನ ಕುಟುಂಬ ಇದಕ್ಕೆ ಸಾಕ್ಷಿ. ಎರಡು ದಿನದ ಗ್ಯಾಪ್ನಲ್ಲಿ ನನ್ನ ಭಾವ ಹಾಗೂ ನನ್ನ ಭಾವನ ತಂದೆಯನ್ನ ಕಳೆದುಕೊಂಡಿದ್ದೇನೆ. ಹೆದರಬೇಡಿ ಅಂತ ಹೇಳ್ತಾರಲ್ಲ ಅದನ್ನು ಕೇಳಬೇಡಿ. ಅದರಿಂದ ಧೈರ್ಯ ಬರುತ್ತೆ ಅಂತ ಹೇಳ್ತಾರೆ, ಭಂಡ ಧೈರ್ಯ ಬರುತ್ತೆ. ಸರ್ಕಾರದವರು ಆರಾಮಾಗಿ ಓಡಾಡ್ತಾರೆ, ಇನ್ನೊಂದಿಷ್ಟು ಜನರು ಕೋವಿಡ್ ಅಂಟಿಸಿಕೊಳ್ಳುವುದಲ್ಲದೇ ಬೇರೆಯವರಿಗೂ ಅಂಟಿಸುತ್ತಾರೆ’ ಅಂತ ಪವನ್ ತಮ್ಮ ನೋವಿನ ನುಡಿಗಳನ್ನು ಆಡಿದ್ದಾರೆ.

 

ಕೊರೊನಾ ಸಮರದಲ್ಲಿ ಭಾರತದ ಜೊತೆ ನಾವಿದ್ದೇವೆ : ಪಾಕ್ ಪ್ರಧಾನಿ ಇಮ್ರಾನ್ ಖಾನ್

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd