ಅದೃಷ್ಟದಿಂದಲೇ ಆತ ಇನ್ನೂ ಟೀಂ ಇಂಡಿಯಾದಲ್ಲಿದ್ದಾನೆ..
ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನವೆಂಬರ್ 25-29 ರವರೆಗೆ ಕಾನ್ಪುರದಲ್ಲಿ ಮತ್ತು ಎರಡನೇ ಟೆಸ್ಟ್ ಡಿಸೆಂಬರ್ 3-7 ರವರೆಗೆ ಮುಂಬೈನಲ್ಲಿ ನಡೆಯಲಿದೆ. ಈ ಸರಣಿಗೆ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಮೊದಲ ಟೆಸ್ಟ್ಗೆ ನಿಯಮಿತ ನಾಯಕ ವಿರಾಟ್ ಕೊಹ್ಲಿ ಅಲಭ್ಯತೆಯಿಂದಾಗಿ ಅಜಿಂಕ್ಯ ರಹಾನೆಗೆ ನಾಯಕತ್ವ ವಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಹಾನೆ ಬಗ್ಗೆ ಪ್ರಮುಖ ಟೀಕೆಗಳನ್ನು ಮಾಡಿದ್ದಾರೆ. ಫಾರ್ಮ್ ನಲ್ಲಿಲ್ಲದಿದ್ದರೂ ತಂಡದಲ್ಲಿ ಆತ ಸ್ಥಾನ ಪಡೆದಿರುವ ಅದೃಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.
ಸ್ಟಾರ್ ಸ್ಪೋಟ್ರ್ಸ್ ಶೋ “ಗೇಮ್ ಪ್ಲಾನ್” ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಿ, ಟೆಸ್ಟ್ ಸರಣಿಯ ಸಿದ್ಧತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. “ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಕಳುಹಿಸುವುದು ಒಳ್ಳೆಯದು. ಹಾಗಿದ್ದರೆ ಶುಭ್ಮನ್ ಗಿಲ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಬೇಕು ಎಂದರು.
ಇದೇ ವೇಳೆ ರಹಾನೆ ಬಗ್ಗೆ ಮಾತನಾಡಿ, ಅವರು ನಿಜವಾಗಿಯೂ ಅದೃಷ್ಟವಂತರು. ಅಗತ್ಯವಿದ್ದಾಗ ನಾಯಕನಾಗಿ ವ್ಯವಹರಿಸೋದಕ್ಕೆ ಅವರಿಗೆ ಅವಕಾಶ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಕನಿಷ್ಠ ಈಗಲಾದರೂ, ಅವರು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಗೌತಿ..