Gautam Gambhir | ಕೆ.ಎಲ್.ರಾಹುಲ್ ಆರಂಭಿಕರಾಗಬಾರದಂತೆ
ಈ ವರ್ಷದ ಆಕ್ಟೋಬರ್ ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ.
ವಿಶ್ವಕಪ್ ಗೆ ತಂಡವನ್ನು ಕಟ್ಟುವ ಹಿನ್ನೆಲೆಯಲ್ಲಿ ಸದ್ಯ ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ.
ಅದರಲ್ಲೂ ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹೀಗಾಗಿ ಅಲ್ಲಿನ ಪಿಚ್ ಗಳಲ್ಲಿ ಅಬ್ಬರಿಸಬಲ್ಲ ಆಟಗಾರರನ್ನು ಬಿಸಿಸಿಐ ಹುಡುಕುತ್ತಿದೆ.
ಇದೇ ಕಾರಣಕ್ಕಾಗಿ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮಿಂಚಿ ಭರವಸೆ ಮೂಡಿಸಿರುವ ಆಟಗಾರರಿಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವಕಾಶಗಳನ್ನು ನೀಡಲಾಗಿದೆ.
ಇಶಾನ್ ಕಿಶನ್, ಆವೇಶ್ ಖಾನ್, ಅರ್ಷದೀಪ್ ಸಿಂಗ್ ರಂತವರಿಗೆ ಅವಕಾಶಗಳನ್ನು ನೀಡಲಾಗಿದೆ.
ಇಲ್ಲಿ ಮಿಂಚಿದ ಬಹುತೇಕ ಆಟಗಾರರಿಗೆ ಆಸ್ಟ್ರೇಲಿಯಾ ಟಿಕೆಟ್ ಸೀಗೋದು ಪಕ್ಕಾ ಎಂದು ಅಂದಾಜಿಸಲಾಗುತ್ತಿದೆ.
ಈ ನಡುವೆ ವಿಶ್ವಕಪ್ ತಂಡದ ಬಗ್ಗೆ ಸಾಕಷ್ಟು ಹಿರಿಯ ಆಟಗಾರರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದು, ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಗಂಭೀರ್ ಅವರು ಇಶಾನ್ ಕಿಶನ್ ಅವರಿಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ.
ಹೌದು..! ಸದ್ಯ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಇಶಾನ್ ಕಿಶನ್ ಸ್ಥಿರ ಆಟವಾಡುತ್ತಿದ್ದಾರೆ.
ಆರಂಭಿಕರಾಗಿ ಕ್ರೀಸ್ ಗೆ ಬರುತ್ತಿರುವ ಇಶಾನ್, ಆಫ್ರಿಕಾ ಬೌಲರ್ ಗಳಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದಾರೆ.
ಈ ಸರಣಿಯಲ್ಲಿ ಈವರೆಗೂ ಎರಡು ಪಂದ್ಯಗಳು ನಡೆದಿದ್ದು, ಇಶಾನ್ ಎರಡೂ ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಅವರು ಒಟ್ಟಾರೆ ಎರಡು ಪಂದ್ಯಗಳಲ್ಲಿ 110 ರನ್ ಗಳಿಸಿದ್ದಾರೆ.
ಹೀಗಾಗಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಹೊಗಳಿರುವ ಗೌತಮ್, ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಇಶಾನ್ ಕಿಶನ್ ಖಂಡಿತವಾಗಿ ಇರಬೇಕು.
ಆಸ್ಟ್ರೇಲಿಯಾದಂತದ ಬೌನ್ಸಿ ಪಿಚ್ ಗಳಲ್ಲಿ ಇಶಾನ್ ಬ್ಯಾಕ್ ಫುಟ್ ಶಾಟ್ಸ್ ವರ್ಕೌಟ್ ಆಗುತ್ತವೆ. ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಘಟಾನುಘಟಿಗಳ ಮಧ್ಯೆ ಇಶಾನ್ ಅಂತಿಮ ತಂಡದಲ್ಲಿ ಇಶಾನ್ ಇರಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶಾನ್ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಬೇಕು. ರಾಹುಲ್ ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಗೆ ಬರಬೇಕು.
ಯಾಕಂದರೆ ಅಸ್ಟ್ರೇಲಿಯಾದಂತ ಬೌನ್ಸಿ ಪಿಚ್ ಗಳ ಮೇಲೆ ಕಿಶನ್ ಅದ್ಭುತವಾಗಿ ಆಡಬಲ್ಲ.
ಹೀಗಾಗಿ ಟಿ 20 ವಿಶ್ವಕಪ್ ಭಾರತ ಪ್ಲೇಯಿಂಗ್ ಇಲೆವೆನ್ ನಲ್ಲಿ ಇಶಾನ್ ಕಿಶನ್ ಖಂಡಿತವಾಗಿ ಇರಬೇಕು ಎಂದು ಗೌತಮ್ ವಾದಿಸಿದ್ದಾರೆ. gautam-gambhir backs ishan kishan