Gautam Gambhir – ಕೊಹ್ಲಿ ಸೆಂಚೂರಿ ಬಗ್ಗೆ ಗೌತಮ್ ಹೀಗೆ ಹೇಳಿದ್ಯಾಕೆ ?
ಟೀಂ ಇಂಡಿಯಾದ ಮಾಜಿ ಕ್ರಿಕೆಟರ್, ಪ್ರಸ್ತುತ ಸಂಸದ ಗೌತಮ್ ಗಂಭೀರ್… ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಉದ್ದೇಶಿಸಿ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಒಂದು ಸೆಂಚೂರಿ ಸಿಡಿಸದೇ ಮೂರು ವರ್ಷಗಳ ಕಾಲ ತಂಡದಲ್ಲಿ ಇರೋದು ಕೊಹ್ಲಿಗೆ ಮಾತ್ರ ಸಾಧ್ಯವಾಯ್ತು ಎಂದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ರಂತಹ ಆಟಗಾರರು ಕೆಲವು ಸಂದರ್ಭಗಳಲ್ಲಿ ಸೆಂಚೂರಿ ಸಿಡಿಸದೇ ಇದ್ದಿದ್ದಕ್ಕೆ ತಂಡದಿಂದ ದೂರವಾಗಿದ್ದರು.
ಪ್ರಸ್ತುತ ಯುವ ಕ್ರಿಕೆಟಿಗರಿಗೆ 1000 ದಿನ ಸೆಂಚೂರಿ ಸಿಡಿಸದೆ ತಂಡದಲ್ಲಿರುವುದು ಊಹಿಸಲು ಅಸಾಧ್ಯವಾದ್ದದ್ದು.

ಆದ್ರೆ ಕೊಹ್ಲಿ ಅವರ ಟ್ರ್ಯಾಕ್ ರೆಕಾರ್ಡ್ ಆತನನ್ನು ತಂಡದಲ್ಲಿ ಇರುವಂತೆ ಮಾಡಿವೆ ಎಂದು ಗೌತಮ್ ಹೇಳಿದ್ದಾರೆ.
ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಬಗ್ಗೆ ಮಾಡಿದ ಟೀಕೆಗಳ ಬಗ್ಗೆ ವಿರಾಟ್ ಅಭಿಮಾನಿಗಳು ಗರಂ ಆಗಿದ್ದಾರೆ.
ಗಂಭಿರ್ ಈ ಹಿಂದೆ ನಡೆದ ವಿಷಯಗಳನ್ನು ಮನಸಿನಲ್ಲಿ ಇಟ್ಟುಕೊಂಡು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕೊಹ್ಲಿ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿರುವುದರಿಂದಲೇ ಅವರು ತಂಡದಲ್ಲಿದ್ದರು. ಜೊತೆಗೆ ಅರ್ಧಶತಕಗಳನ್ನು ಗಳಿಸಿದ್ದರು ಎನ್ನುತ್ತಿದ್ದಾರೆ.








