Gautam Gambhir | ಪಾಕ್ ಪಂದ್ಯಕ್ಕೂ ಮುನ್ನಾ ಟೀಂ ಇಂಡಿಯಾ ಗೌತಿ ಸಲಹೆ
ಚುಟುಕು ಕ್ರಿಕೆಟ್ ನ ಮಹಾಸಮರಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇದು ಒಂದು ರೀತಿಯ ಸೇಡಿನ ಪಂದ್ಯ ಕೂಡ ಆಗಿದೆ. ಯಾಕೆಂದ್ರೆ ಕಳೆದ ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ವಿರುದ್ಧ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸೆಣಸಿತ್ತು.
ಆ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯಂತ ಹೀನಾಯವಾಗಿ ಸೋಲುಂಡಿತ್ತು. ಹೀಗಾಗಿ ಟೀಂ ಇಂಡಿಯಾ ಈ ಬಾರಿ ಸೇಡು ತೀರಿಸಿಕೊಳ್ಳುತ್ತಾ ಎಂಬುವುದನ್ನ ಕಾದು ನೋಡಬೇಕಾಗಿದೆ.
ಇದು ಹೀಗಿದ್ದರೇ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಟೀಂ ಇಂಡಿಯಾಗೆ ಒಂದು ಸಲಹೆಯನ್ನು ನೀಡಿದ್ದಾರೆ.
ಭಯಪಟ್ಟರೇ ಕೆಲಸ ಆಗದು. ಆಫ್ರಿದಿ ಬೌಲಿಂಗ್ ಮಾಡುವಾಗ ವಿಕೆಟ್ ಕಾಪಿಟ್ಟುಕೊಳ್ಳಲು ಪ್ರಯತ್ನಿಸಬೇಡಿ.
ಆತನ ಬೌಲಿಂಗ್ ನಲ್ಲಿ ರನ್ ಗಳಿಸಲು ಮುಂದಾಗಿದೆ. ಯಾಕೆಂದರೆ ವಿಕೆಟ್ ಕಾಪಾಡಿಕೊಳ್ಳಬೇಕು ಎಂಬ ಮೈಂಡ್ ಸೆಟ್ ನಿಂದಲೇ ಸಮಸ್ಯೆ ಉಂಟಾಗುತ್ತದೆ.
ಅದು ನಿಮ್ಮ ಫುಟ್ ವರ್ಕ್ ಆಗಿರಬಹುದು ಇನ್ನೊಂದಾಗಿರಬಹುದು. ಆದ್ರೂ ಟಿ 20 ಕ್ರಿಕೆಟ್ ನಲ್ಲಿ ವಿಕೆಟ್ ಕಾಪಾಡಿಕೊಳ್ಳಲು ಪ್ರಯತ್ನಿಸಬಾರದು.
ನಿಜ ಹೇಳಬೇಕೆಂದರೇ ಆಫ್ರಿದಿಯನ್ನ ಟಾರ್ಗೆಟ್ ಮಾಡಿ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ ಗಳು ಬ್ಯಾಟ್ ಬೀಸಬೇಕು ಎಂದಿದ್ದಾರೆ.