Gautam Gambhir | ದಿನೇಶ್ ಟಿ 20 ವಿಶ್ವಕಪ್ ಆಡಬಾರದು
ಟೀಂ ಇಂಡಿಯಾ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಟಿ 20 ವಿಶ್ವಕಪ್ 2022 ಗಾಗಿ ಆಯ್ಕೆ ಮಾಡುವ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡುವ ಬಗ್ಗೆ ಗೌತಿ ತಮ್ಮದೇಯಾದ ವಾದ ಮಂಡಿಸಿದ್ದಾರೆ.
ಕಾರ್ತಿಕ್ ಇನ್ನಿಂಗ್ಸ್ ನ ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದು ಎರಡು ಮೂರು ಓವರ್ ಗಳಲ್ಲಿ ಮಾತ್ರ ಆಡುತ್ತೇನೆ ಅಂದ್ರೆ ಆಗುವುದಿಲ್ಲ.
ಟೀಂ ಇಂಡಿಯಾ ದಿನೇಶ್ ಕಾರ್ತಿಕ್ ರಂತಹ ಮ್ಯಾಚ್ ಫಿನಿಷರ್ ಗಳಿಗಾಗಿ ಹುಡುಕಾಟ ನಡೆಸುತ್ತಿದೆ.
ಆದ್ರೆ ಆ ಜವಾಬ್ದಾರಿಯನ್ನು ಒಬ್ಬ ಆಲ್ ರೌಂಡರ್ ವಹಿಸಿಕೊಂಡರೇ ಚೆನ್ನಾಗಿರುತ್ತದೆ ಎಂದು ಗೌತಮ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ದಿನೇಶ್ ಕಾರ್ತಿಕ್ ಕೇವಲ ಎರಡು ಮೂರು ಓವರ್ ಗಳಲ್ಲಿ ಆಡುವುದಕ್ಕೆ ಸೀಮಿತವಾದರೇ ಅವರನ್ನ ವಿಶ್ವಕಪ್ ಗೆ ಆಯ್ಕೆ ಮಾಡುವುದು ಸೂಕ್ತವಲ್ಲ ಎಂದು ಗಂಭೀರ್ ವಾದಿಸಿದ್ದಾರೆ.
ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್, ದೀಪಕ್ ಹೂಡಾ, ರವೀಂದ್ರ ಜಡೇಜಾ ರಂತಹ ಆಟಗಾರರನ್ನು ಫಿನಿಷರ್ ಜಾಗಕ್ಕಾಗಿ ತಯಾರು ಮಾಡಿ.
ಸೂರ್ಯ ಕುಮಾರ್ ಯಾದವ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ನಂತಹ ಪ್ಲೇಯರ್ಸ್ ಇರುವ ತಂಡದಲ್ಲಿ ದಿನೇಶ್ ಕಾರ್ತಿಕ್ ಗೆ ಸ್ಥಾನ ಸಿಗುತ್ತದೆ ಎಂದು ನಾನು ಅಂದುಕೊಳ್ಳುತ್ತಿಲ್ಲ.
ಕಾರ್ತಿಕ್ ಮಿಂಚಿನ ಇನ್ನಿಂಗ್ಸ್ ಜೊತೆ ಜೊತೆಗೆ ಸುದೀರ್ಘ ಇನ್ನಿಂಗ್ಸ್ ಆಡುವುದರ ಕಡೆಗೂ ಗಮನಕೊಡಬೇಕಾಗುತ್ತದೆ ಎಂದು ಗಂಭೀರ್ ಸಲಹೆ ನೀಡಿದ್ದಾರೆ.
ಅಲ್ಲದೇ ಅಂತಿಮ ತಂಡದಲ್ಲಿ ಆತನಿಗೆ ಚಾನ್ಸ್ ಇಲ್ಲದಿರುವಾದ ಆತನ್ನು ಆಸ್ಟ್ರೇಲಿಯಾಗೆ ಕಳುಹಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದಿದ್ದಾರೆ.
ಇನ್ನು 37 ವರ್ಷದ ದಿನೇಶ್ ಕಾರ್ತಿಕ್ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಕಳೆದ ಐಪಿಎಲ್ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಬ್ಬರಿಸಿದ ದಿನೇಶ್ ಕಾರ್ತಿಕ್, ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಆಯ್ಕೆ ಆದರು.
ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎರಡು ಎಸೆತಗಳನ್ನು ಮಾತ್ರ ಎದುರಿಸಿದ ದಿನೇಶ್ ಕಾರ್ತಿಕ್ ಒಂದು ರನ್ ಗಳಿಸಿದರು.
ಎರಡನೇ ಪಂದ್ಯದಲ್ಲಿ 21 ಎಸೆತಗಳಲ್ಲಿ 30 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ಆರು ರನ್ ಗಳಿಸಿದ್ದಾರೆ.
ಇತ್ತ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಪರ 16 ಪಂದ್ಯಗಳನ್ನಾಡಿದ ದಿನೇಶ್ ಕಾರ್ತಿಕ್, 55 ರ ಸರಾಸರಿಲ್ಲಿ 183.33 ಸ್ಟ್ರೈಕ್ ರೇಟ್ ನಲ್ಲಿ 330 ರನ್ ಗಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಪ್ರದರ್ಶನವನ್ನು ಕ್ರಿಕೆಟ್ ಜಗತ್ತು ಮೆಚ್ಚಿಕೊಂಡಿದ್ದು, ಹಿರಿಯ ಕ್ರಿಕೆಟಿಗರು ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ.