Sunil Gavaskar | “ಕನ್ನಡಿಗ ಮಯಾಂಕ್ ರನ್ನ ಬಾಸ್” ಎಂದ ಗವಾಸ್ಕರ್
ಭಾರತದಲ್ಲಿ ಟೀಂ ಇಂಡಿಯಾ ಓಪನರ್ ಮಯಾಂಕ್ ಅಗರ್ವಾಲ್ ಬಾಸ್ ರಂತೆ ಬ್ಯಾಟ್ ಬೀಸುತ್ತಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೊಗಳಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಹಾನೆ, ಚೇತೇಶ್ವರ್ ಪೂಜಾರ ಬದಲಿಗೆ ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಕಣಕ್ಕಿಳಿಸಿದ್ದರು.
ಇನ್ನು ಆರಂಭಿಕರಾಗಿ ಮಯಾಂಕ್ ಅಗರ್ ವಾಲ್ ಕಣಕ್ಕಿಳಿದ್ದರು. ಮಯಾಂಕ್ ಕೇವಲ 33 ರನ್ ಗಳಿಸಿದ್ದರು. ಹೀಗಾಗಿ ಅವರ ಮೇಲೆ ಟೀಕೆಗಳು ಕೇಳಿಬರುತ್ತಿವೆ.

ಈ ವಿಚಾರವಾಗಿ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ಶುಭ್ ಮನ್ ಗಿಲ್ ಬದಲಿಗೆ ಮಯಾಂಕ್ ಅವರನ್ನ ಸಮರ್ಥಿಸಿದ್ದಾರೆ.
“ಗಿಲ್ ಕಳೆದ ಎರಡು ತಿಂಗಳಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಅವರು ಕನಿಷ್ಠ ರಣಜಿ ಟ್ರೋಫಿಯಲ್ಲೂ ಆಡಿಲ್ಲ.
ಹೀಗಾಗಿ ಗಿಲ್ ಬದಲಿಗೆ ಮಯಾಂಕ್ ಅವರನ್ನ ಆಡಿಸೋ ಟೀಂ ಇಂಡಿಯಾದ ಮ್ಯಾನೆಜ್ ಮೆಂಟ್ ತೀರ್ಮಾನ ಸರಿಯಾಗಿದೆ.
ಮಯಾಂಕ್ ಅಗರ್ವಾಲ್ ತವರಿನಲ್ಲಿ ಅದ್ಭುತವಾಗಿ ಆಡುತ್ತಾರೆ. ಅವರು ಹೋಂ ಸೀರಿಸ್ ನಲ್ಲಿ ದೊಡ್ಡ ಸ್ಕೋರ್ ಗಳಿಸಿದ್ದಾರೆ.
ಅವರು ಭಾರತದಲ್ಲಿ ಬಾಸ್ ರಂತೆ ಬ್ಯಾಟ್ ಬೀಸುತ್ತಾರೆ. ಆರಂಭಿಕರಾಗಿಯೂ ದ್ವಿಶತಕ ಬಾರಿಸಿದ್ದಾರೆ. ಹಾಗಾಗಿ ಅವರು ಖಂಡಿತವಾಗಿಯೂ ಇನ್ನಿಂಗ್ಸ್ ಆರಂಭಿಸಬೇಕು ಎಂದು ಹೇಳಿದ್ದಾರೆ.
Gavaskar reveals having a word with Mayank Agarwal








