ಸತತ ಆರ್ಥಿಕ ಹಿಂಜರಿತ | ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಮೋದಿ
ನವದೆಹಲಿ : ಕೊರೊನಾ ವೈರಸ್ ದಿಂದಾಗಿ ಭಾರತದ ಆರ್ಥಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ವರ್ಷದ ಮೊದಲ ಮೊದಲಾರ್ಧದಲ್ಲಿ ಸತತ ಎರಡು ಬಾರಿ ತ್ರೈಮಾಸಿಕದಲ್ಲಿ ಸತತ ಇಳಿಕೆ ಕಂಡುಬಂದಿದೆ ಎಂದು ಆರ್ ಬಿಐ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಜುಲೈಯಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 8.6ರಷ್ಟು ಕುಸಿದಿದೆ.
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಲಾಕ್ ಡೌನ್ ಹೇರಿಕೆಯಾಗಿ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಸಮಯದ ಜಿಡಿಪಿಗೆ ಹೋಲಿಸಿದರೆ ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿದಿತ್ತು. ಈ ವರ್ಷ ಇಡೀ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 9.5ರಷ್ಟು ಕುಸಿಯಬಹುದೆಂದು ಆರ್ ಬಿಐ ಅಂದಾಜಿಸಿದೆ.
ಡ್ರಗ್ಸ್ ಪ್ರಕರಣ : ನಟ ಅರ್ಜುನ್ ರಾಂಪಾಲ್ ಗೆ ಸಮನ್ಸ್
ಆರ್ ಬಿಐನ ಈ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೆಟ್ಟ ನೀತಿಯಿಂದಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶ ಆರ್ಥಿಕ ಹಿಂಜರಿಕೆಗೆ ಒಳಗಾಗಿದೆ . ಇದುವರೆಗೂ ಬಲಿಷ್ಠ ರಾಷ್ಟ್ರವಾಗಿದ್ದ ಭಾರತ ಮೋದಿ ಅವರ ಕೆಲವು ಕೆಟ್ಟ ನಿರ್ಧಾರಗಳಿಂದ ದುರ್ಬಲ ರಾಷ್ಟ್ರವಾಗಿದೆ ಎಂದು ಟೀಸಿದ್ದಾರೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಭಾರತ ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿದೆ ಎಂದು RBI ಒಪ್ಪಿಕೊಂಡಿದೆ. ಬ್ರಿಟಿಷ್ ನಂತರ, ನರೇಂದ್ರ ಮೋದಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎಂದು ಟೀಕಿಸಿದ್ದಾರೆ.
.Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel