ಬಹುವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಜೆನಿಲಿಯಾ ಕಮ್ ಬ್ಯಾಕ್
ಜನಾರ್ದನ ರೆಡ್ಡಿ ಪುತ್ರ ಸಿನಿಮಾದಲ್ಲಿ ಜೆನಿಲಿಯಾ ನಟನೆ
ಕಿರೀಟಿ ಚೊಚ್ಚಲ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ ‘ರಣಧೀರ’ ಜೋಡಿ
ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ರಾಜಜಮೌಳಿ
ಸ್ಯಾಂಡಲ್ ವುಡ್ ಗೆ ಜನಾರರ್ಧನ ರೆಡ್ಡಿ ಪುತ್ರ ಕಿರೀಟಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ… ಕಿರೀಟಿ ಮೊದಲ ಸಿನಿಮಾಗೆ RRR , ಬಾಹುಬಲಿ ಖ್ಯಾತಿಯ ಸೆನ್ಷೇಷನಲ್ ನಿರ್ದೇಶಕ ರಾಜಮೌಳಿ ಅವರು ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ..
ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿವೆ.. ಹೌದು ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಕಿರೀಟಿ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ.. ಅದ್ರಲ್ಲೂ ಕನ್ನಡ ತೆಲುಗಿನಲ್ಲಿ ಬ್ಯುಸಿಯಿರೋ ಕ್ಯೂಟ್ ಬೆಡಗಿ ಶ್ರೀಲೀಲಾ ಹಾಗೂ ಸೌತ್ ನಲ್ಲಿ ಒಂದ್ ಟೈಮ್ ನಲ್ಲಿ ಮಿಂಚಿ ಮದುವೆ ನಂತರ ಸಿನಿಮಾ ರಂಗದಿಂದ ಬ್ರೇಕ್ ಪಡೆದಿದ್ದ ಸತ್ಯ ಈಸ್ ಇನ್ ಲವ್ ಬೆಡಗಿ ಜೆನಿಲಿಯಾ ಡಿಸೋಜಾ ಕಾಣಿಸಿಕೊಳ್ತಿರುವುದು ವಿಶೇಷ..
ಈ ಮೂಲಕ ಸುಮಾರು ವರ್ಷಗಳ ನಂತರ ಕನ್ನಡ ಸಿನಿಮಾರಂಗಕ್ಕೆ ಜೆನಿಲಿಯಾ ಕಮ್ ಬ್ಯಾಕ್ ಮಾಡ್ತಿದ್ದಾರೆ.. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ ನಾಯಕ ಕಿರೀಟಿಗೆ ತಂದೆ ತಾಯಿ ಪಾತ್ರದಲ್ಲಿ ರಣಧೀರ ಜೋಡಿ ಕಾಣಿಸಿಕೊಳ್ತಿದೆ.. ಹೌದು ಖುಷ್ಬೂ ಹಾಗೂ ರವಿಚಂದ್ರನ್ ಈ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡಲಿದ್ದಾರೆ.. ಖುಷ್ಬೂ ಕೂಡ 12 ವರ್ಷಗಳ ಬಳಿಕ ಕನ್ನಡ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ..