ಕೋಲಾರ: ಸರ್ಕಾರದ ಮೇಲಿನ ಹೊರೆ ತಪ್ಪಿಸುವುದಕ್ಕಾಗಿ 11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನ ಎಪಿಎಲ್‌ಗೆ (BPL APL Card) ಬದಲಾವಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.
ಕೋಲಾರದಲ್ಲಿ (Kolara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ಲಕ್ಷ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಗೆ ಬದಲಾವಣೆ ಆಗುತ್ತಿವೆ. ಕೇಂದ್ರ ಸರ್ಕಾರ ಎಲ್ಲೂ ಅಕ್ಕಿ ಕಡಿತ ಮಾಡುತ್ತಿಲ್ಲ. ಬಿಪಿಎಲ್ ನಿಂದ ನಿಂದ ಎಪಿಎಲ್‌ಗೆ ಬದಲಾವಣೆ ಬಗ್ಗೆ ಯೋಚನೆ ಮಾಡಿದಿರಾ? ಎಪಿಎಲ್ ಕಾರ್ಡ್‌ನವರು ದುಡ್ಡು ಕೊಡಬೇಕಲ್ವಾ? ಸರ್ಕಾರದ ಮೇಲೆ ಹೊರೆ ತಪ್ಪಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ರಾಜ್ಯ ಸರ್ಕಾರ 1.5 ಲಕ್ಷ ಕೋಟಿ ರೂ. ಸಾಲ ಮಾಡುತ್ತಿದೆ. ಗ್ಯಾರಂಟಿ ಸ್ಕೀಮ್‌ನಿಂದ ಖಜಾನೆ ಏನೂ ಖಾಲಿ ಆಗಿಲ್ಲ. ಮೋದಿ ಅವರು ಬಂದು ನೋಡಬೇಕಿಲ್ಲ. ನಾವೇ ಇಲ್ಲಿ ನೋಡುತ್ತಿದ್ದೇವೆ. ಸಿಎಂ ಹೇಳಿದಂತೆ ಕೇಸ್ ಹಾಕಲಿ ಬಿಡಿ ನೋಡೋಣ ಎಂದಿದ್ದಾರೆ.
ವಕ್ಫ್ ಆಸ್ತಿ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯಬೇಕು. ನೋಟಿಸ್ ಹಿಂಪಡೆಯಲು ಸಿಎಂ ಸೂಚನೆ ಕೊಟ್ಟಿದ್ದಾರೆ ಅಂತ ಮಂತ್ರಿನೇ ಹೇಳುತ್ತಿದ್ದಾರೆ. ಸರ್ಕಾರದ ಕೆಲವೂ ತೀರ್ಮಾನದಿಂದ ಗೊಂದಲ ಸೃಷ್ಟಿಯಾಗಿದೆ. ಉಳ್ಳವರು ವಕ್ಫ್ ಆಸ್ತಿ ವಶಕ್ಕೆ ಪಡೆದಿರುವ ಬಗ್ಗೆ ಏನೂ ಕ್ರಮ ಆಗಿಲ್ಲ. ರೈತರ ಜಮೀನು ಮಾತ್ರ ವಕ್ಫ್ ಆಸ್ತಿ ಮಾಡಲಾಗುತ್ತಿದೆ. ಇದರಿಂದ ಅಶಾಂತಿ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.