GG vs UPW : ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡ ಯೂಪಿ : ಹೊರಬಿದ್ದ RCB, ಗುಜರಾತ್…
ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಪ್ಲೇ ಆಫ್ ಸ್ಥಾನವನ್ನ ಯುಪಿ ವಾರಿಯರ್ಸ್ ಖಚಿತಪಡಿಸಿಕೊಂಡಿದೆ. ನಿನ್ನೆ ಸಂಜೆ ನಡೆದ ರೋಚಕ ಹಣಾಹಣಿಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನ ಮೂರು ವಿಕೆಟ್ ಗಳಿಂದ ಬಗ್ಗು ಬಡಿದ ಯೂಪಿ ವಾರಿಯರ್ಸ್ ಮೂರನೇ ತಂಡವಾಗಿ ಪ್ಲೇ ಆಫ್ ಅನ್ನ ಪ್ರವೇಶಿಸಿದೆ. ಲೀಗ ನಲ್ಲಿ ಉಳಿದ ಎರಡು ತಂಡಗಳಾದ ಬೆಂಗಳೂರು ಮತ್ತು ಗುಜರಾತ್ ಪ್ಲೇ ಆಫ್ ರೇಸ್ನಿಂದ ಬಿದ್ದಿವೆ.
ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ನಾಯಕಿ ಸ್ನೇಹ್ ರಾಣಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡ 20 ಓವರ್ಗಳಲ್ಲಿ ಆರು ವಿಕೆಟ್ಗೆ 178 ರನ್ಗಳ ಸವಾಲಿನ ಸ್ಕೋರ್ ದಾಖಲಿಸಿತು. ಯುಪಿ ಬ್ಯಾಟ್ಸ್ಮನ್ಗಳು 1 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು ಚೇಸ್ ಮಾಡಿದರು. ಗ್ರೇಸ್ ಹ್ಯಾರಿಸ್ (72 ರನ್) ಮತ್ತು ತಹ್ಲಿಯಾ ಮೆಕ್ಗ್ರಾತ್ (57 ರನ್) ಅರ್ಧಶತಕ ಗಳಿಸಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
179 ರನ್ಗಳ ಗುರಿ ಬೆನ್ನತ್ತಿದ ಯುಪಿ 39 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ತಹ್ಲಿಯಾ ಮೆಕ್ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ 53 ಎಸೆತಗಳಲ್ಲಿ 78 ರನ್ ಜೊತೆಯಾಟ ನಡೆಸಿ ತಂಡವನ್ನು 100ರ ಗಡಿ ದಾಟಿಸಿದರು. ಸೋಫಿ ಎಕ್ಲೆಸ್ಟೋನ್ ಕೊನೆಯಲ್ಲಿ 19 ರನ್ ಗಳಿಸಿ ಉಳಿದ ಕೆಲಸವನ್ನ ಪೂರೈಸಿದರು.
GG vs UPW : UP secures play off spot: RCB out, Gujarat…