ಬಾಲಕನ ಕಾಲು ಕಚ್ಚಿದ ನಾಯಿ – ಮಾಲಿಕರಿಗೆ 5000 ದಂಡ….
ಇತ್ತೀಚೆಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ನಾಯಿಯೊಂದು ಲಿಫ್ಟ್ ನಲ್ಲಿ ಬಾಲಕನ ಕಾಲು ಕಚ್ಚಿದ್ದ ವಿಡಿಯೋ ವೈರಲ್ ಆಗಿತ್ತು, ಈ ಘಟನೆಗೆ ಸಂಬಂಧಿಸಿದಂತೆ ನಾಯಿ ಮಾಲಿಕರಿಗೆ ಮುನ್ಸಿಪಾಲಿಟಿ ಕಾರ್ಪೋರೇಷನ್ ನವರು ಐದು ಸಾವಿರ ದಂಡ ವಿಧಿಸಿದ್ದಾರೆ.
ಗಾಜಿಯಾಬಾದ್ ನಗರದ ರಾಜ್‌ನಗರ ಎಕ್ಸ್‌ಟೆನ್ಶನ್ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ, ಹೌಸಿಂಗ್ ಸೊಸೈಟಿ ಲಿಫ್ಟ ನಲ್ಲಿ ಮಾಲೀಕರು ನಾಯಿಯನ್ನು ಲಿಫ್ಟ್ನೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಒಳಗಡೆಯಿದ್ದ ಬಾಲಕನನ್ನು ನೋಡಿ ಬೊಗಳಲಾರಂಭಿಸಿದ ನಾಯಿ ಆತನ ಕಾಲಿಗೆ ಕಚ್ಚಿತ್ತು. ಈ ಘಟನೆ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿತ್ತು.
ಆದರೆ ಆಶ್ಚರ್ಯಕರ ಸಂಗತಿಯೆಂದರೆ, ನಾಯಿ ಕಚ್ಚಿದ್ದರಿಂದ ಭಯಗೊಂಡು ನೋವಿನಿಂದ ಅಳುತ್ತಿದ್ದ ಆ ಬಾಲಕನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಆ ಮಹಿಳೆ ತನ್ನ ನಾಯಿಯನ್ನು ಕರೆದುಕೊಂಡು ಲಿಫ್ಟ್ನಿಂದ ಹೊರಗೆ ಹೋಗುತ್ತಾಳೆ.
ಈ ಸಿಸಿಟಿವಿ ದೃಶ್ಯಾವಳಿಯನ್ನು ಇಟ್ಟುಕೊಂಡು ಆ ಬಾಲಕನ ಪೋಷಕರು ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಘಟನೆಯ ನಂತರ, ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ಹೋದಾಗ ಆ ಸಾಕು ನಾಯಿಯನ್ನು ರಿಜಿಸ್ಟರ್ ಮಾಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ಆಕೆಗೆ 5,000 ರೂ. ದಂಡ ವಿಧಿಸಲಾಗಿದೆ.