ಲವ್ ಪ್ರೊಪೊಸಲ್ ಗೆ ಪ್ರತಿಕ್ರಿಯಿಸಲು ಸಮಯಬೇಕು ಎಂದ ಯುವತಿ ಗತಿ ಏನಾಯ್ತು ನೋಡಿ..!
ಬೆಂಗಳೂರು : ಯುವಕನೊಬ್ಬ ಯುತಿಯ ಬಳಿ ಪ್ರೇಮ ನಿವೇದನೆಯನ್ನ ಮಾಡಿದ್ದು, ಆಕೆ ಪ್ರತಿಕ್ರಿಯಿಸಲು ಸಮಯಬೇಕು ಎಂದು ಹೇಳಿದ್ದಾಳೆ. ಇಷ್ಟಕ್ಕೆ ಈ ಪಾಗಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದೂ ಅಲ್ದೇ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಫುಟ್ ಪಾತ್ ನಲ್ಲಿ ಮಲಗಿದ್ದ ಹುಡುಗಿಯ ಮೇಲೆ ಅತ್ಯಚಾರವೆಸಗಿದ ಕೀಚಕ..!
ಹೌದು 24 ವರ್ಷದ ಯುವತಿ ತನ್ನ ಲವ್ ಪ್ರೊಪೊಸಲ್ ಗೆ ಉತ್ತರ ನೀಡಲು ಸಮಯ ಕೇಳಿದ್ದಕ್ಕೆ ಈ ಇಂತಹ ಕೃತ್ಯವೆಸಗಿದ್ದಾನೆ. ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇದಕ್ಕೆ ಯುವತಿ ಸ್ವಲ್ಪ ಸಮಯಬೇಕು, ಮನೆಯವರನ್ನು ಕೇಳಬೇಕು ಎಂದು ಹೇಳಿದ್ದಾಳೆ. ಇದಕ್ಕೆ ಕೋಪಗೊಂಡ ಯುವಕ ಆಕೆಯ ಕಪಾಳಕ್ಕೆ ಬಾರಿಸಿ ಹಲ್ಲೆ ನಡೆಸಿ ಆಕೆಯ ಫೋನ್ ಮತ್ತು 45ಸಾವಿರ ಹಣವನ್ನು ದೋಚಿ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಾನಸಿಕ ಅಸ್ವಸ್ಥ ಹುಡುಗನಿಗೆ ಲೈಂಗಿಕ ಕಿರುಕುಳ, ಕೊಲೆ : ಆರೋಪಿಗೆ ಮರಣದಂಡನೆ..!