ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ
ಕಾರವಾರ: ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದಿದೆ.
ಮೇಘ (20) ಮೃತ ದುರ್ದೈವಿ. ಮೊಬೈಲ್ ನೋಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೇಘ ಮೂಲತಃ ಸಿದ್ದಾಪುರದವಳು. ಪ್ಯಾರಾಮೇಡಿಕಲ್ ಕೋರ್ಸ್ ಮುಗಿಸಿಕೊಂಡಿದ್ದ ಯುವತಿ ಮೊಬೈಲ್ ಗೀಳು ಹಚ್ಚಿಕೊಂಡಿದ್ದಳು. ಇದಲ್ಲದೇ ಸ್ನೇಹಿತರೊಂದಿಗೆ ಮೊಬೈಲ್ ನಲ್ಲಿ ಸಧಾ ಹರಟೆ ಹೊಡಿಯುತ್ತಿದ್ದರಿಂದ ಪೋಷಕರು ತಿಳಿಹೇಳಿದ್ದಾರೆ.
ಹೆತ್ತವರ ಮಾತಿನಿಂದ ಕೋಪಗೊಂಡಿದ್ದ ಈಕೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








