ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಗಳ ಜೊತೆ ಎಂಟ್ರಿಯಾದ ಯುವತಿ..!
ಉತ್ತರಪ್ರದೇಶ: ಯುವಕನೊಬ್ಬನ ನಿಶ್ಚಿತಾರ್ಥಕ್ಕೆ ಬೌನ್ಸರ್ ಗಳ ಜೊತೆಗೆ ನುಗ್ಗಿದ ಯುವತಿ ಬಿಚ್ಚಿಟ್ಟ ಸತ್ಯದಿಂದ ಅಲ್ಲಿ ನೆರೆದಿದ್ದ ಅತಿಥಿಗಳು, ಯುವಕ ಹಾಗೂ ಆತನನ್ನ ಮದುವೆಯಾಗಬೇಕಿದ್ದ ಯುವತಿ ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ದು, ಕಡೆಗೂ ನಿಶ್ಚಿತಾರ್ಥವು ಕ್ಯಾನ್ಸಲ್ ಆಗಿದೆ. ಈ ಘಟನೆ ಉತ್ತರಪ್ರದೇಶದ ಬರೇಲಿಯ ದೆಹಲಿ ರಸ್ತೆಯ ಹೋಟೆಲ್ ನಲ್ಲಿ ನಡೆದಿದೆ.
ಹೌದು.. ತನ್ನ ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಯುವಕ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿದ್ದಾಳೆ. ಇದರಿಂದ ದೊಡ್ಡ ಹೈಡ್ರಾಮಾವೇ ನಡೆದುಹೋಗಿದ್ದು ಎಂಗೇಜ್ ಮೆಂಟ್ ಕ್ಯಾನ್ಸಲ್ ಆಗಿದೆ. ಅಷ್ಟೇ ಅಲ್ಲ ಮರುದಿನ ನಡೆಯಬೇಕಿದ್ದ ಮದುವೆಯನ್ನು ಕೂಡ ರದ್ದು ಮಾಡಲಾಗಿದೆ.
ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..!
ಮೀರತ್ ನಿವಾಸಿಗಳಾಗಿರುವ ಯುವಕ-ಯುವತಿ ಮೊದಲೇ ಪ್ರೀತಿಸಿದ್ದು ಆಕೆಯಿಂದ ದೂರವಾಗಿದ್ದ ಯುವಕ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಯುವತಿ ಬೌನ್ಸರ್ ಗಳ ಜೊತೆಗೆ ನೇರವಾಗಿ ಮದುವೆ ಮನೆಗೆ ಬಂದು ಯುವಕನಿಗೆ ಶಾಕ್ ಕೊಟ್ಟಿದ್ದಾಲೆ.
ನಿಶ್ಚಿತಾರ್ಥ ನಡೆಯುತ್ತಿದ್ದ ಸ್ಥಳಕ್ಕೆ ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ ಅತ್ಯಾಚಾರ ಆರೋಪ ಮಾಡಿ ನಿಶ್ಚಿತಾರ್ಥವನ್ನು ನಿಲ್ಲಿಸಿದ್ದಾಳೆ. ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಯುವತಿ ಹಾಗೂ ಯುವಕನಿಂದ ಹೇಳಿಕೆ ಪಡೆದು ಕೇಸ್ ದಾಖಲಿಸಿಕೊಂಡು ಪ್ರಕರಣವನ್ನು ಮೀರತ್ ಗೆ ವರ್ಗಾವಣೆ ಮಾಡಿದ್ದಾರೆ.
ತಂದೆ ಹೇರ್ ಕಟ್ ಮಾಡಿಸಿಕೊಳ್ಳುವಂತೆ ಗದರಿದ್ದಕ್ಕೆ ಮಗ ಹೀಗಾ ಮಾಡೋದು..!
ಈ ಬಗ್ಗೆ ಮಾಹಿತಿ ನೀಡಿದ ಯುವಕನ ತಂದೆ, ಯುವತಿ ಯಾರು ಎನ್ನುವುದು ನಮ್ಮ ಕುಟುಂಬಕ್ಕೆ ತಿಳಿದಿಲ್ಲ. ನನ್ನ ಮಗನನ್ನು ಇಷ್ಟಪಡುತ್ತಿದ್ದಾಳೆ. ಬಲವಂತವಾಗಿ ಮದುವೆಯಾಗಲು ಮುಂದಾಗಿದ್ದಾಳೆ. ಬೌನ್ಸರ್ ಜೊತೆಗೆ ಆಗಮಿಸಿ ನಡೆಯಬೇಕಿದ್ದ ಸಮಾರಂಭವನ್ನು ರದ್ದುಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಆದ್ರೆ ಯುವತಿ ತನನ್ನನ್ನ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಮೋಸಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಸಂಪೂರ್ಣ ತನಿಖೆ ಬಳಿಕ ನಿಂಜಾಂಶ ಗೊರತ್ತಾಗಬೇಕಿದೆ.
ಲಾರಿಯ ಇಂಜಿನ್ ಗೆ ತಗುಲಿದ ಬೆಂಕಿ : ಲಾರಿಯಲ್ಲೇ ಚಾಲಕ ಸಜೀವ ದಹನ








